BMTC: ಕಿಲ್ಲರ್ ಬಿಎಂಟಿಸಿಗೆ ಮಗು ಬಲಿ , ನಾಲ್ವರಿಗೆ ಗಾಯ -ಕಂಡಕ್ಟರ್ ಬೇಜಬ್ದಾರಿಯಿಂದ ಘಟನೆ ಆರೋಪ

BMTC: ಸ್ಪೀಡ್ ಕಂಟ್ರೋಲ್ ಮಾಡಲಾಗದೇ ಪೀಣ್ಯ 2 ನೇ ಹಂತ ಬಸ್ ನಿಲ್ದಾಣದ ಬಳಿ ಬಸ್ ಡಿಕ್ಕಿ ರಬಸಕ್ಕೆ ಸ್ಥಳದಲ್ಲೇ ಮಗುವೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ಘಟಕ 22 ಕ್ಕೆ ಸೇರಿದ KA.51 AK4170 ನಂಬರ್ ಬಸ್ ನಿಂದ ಈ ಅಪಘಾತ ಸಂಭವಿಸಿದೆ. ಪೀಣ್ಯ 2ನೇ ಹಂತದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ ಈ ಘಟನೆ ನಡೆದಿದ್ದು, ಕಂಡಕ್ಟರ್ ಬೇಜಬ್ದಾರಿಯಿಂದ ಈ ಅಪಘಾತ ನಡೆದಿದೆ ಎಂದು ಹೇಳಲಾಗುತ್ತಿದೆ.

ಪುಟ್ ಪಾತ್ ಮೇಲೆ ಇದ್ದ ಸಣ್ಣ ಕ್ಯಾಂಟೀನ್ ನಲ್ಲಿ ಜನ ಟೀ, ಕಾಫೀ ಕುಡಿಯಲು ಅಲ್ಲಿ ಸೇರಿದ್ದರು. ಇದೇ ವೇಳೆ ಬಸ್ ಏಕಾಏಕಿ ಕ್ಯಾಂಟೀನ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಒಂದು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಇನ್ನು ಬಿಎಂಟಿಸಿ ಬಸ್ ಡಿಕ್ಕಿಯ ರಭಸಕ್ಕೆ ಕ್ಯಾಂಟೀನ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್ ನ ಮುಂಭಾಗ ಗ್ಲಾಸ್ ಕೂಡ ಜಖಂ ಆಗಿದೆ. ಈ ಘಟನೆ ಕಂಡಕ್ಟರ್ ಅಜಾಗರೂಕತೆಯಿಂದಲೇ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಲಕ ಇಲ್ಲ ಅಂತ ಬಸ್ ಚಾಲನೆ ಮಾಡಲು ಮುಂದಾಗಿದ್ದ ಬಿಎಂಟಿಸಿ ಕಂಡಕ್ಟರ್, ಈ ವೇಳೆ ನಿಯಂತ್ರಣ ತಪ್ಪಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ರಸ್ತೆ ಬದಿ ಅಂಗಡಿಗೆ ನುಗ್ಗಿದೆ. ಬೆಳಿಗ್ಗೆ 8.45 ರ ಸುಮಾರಿಗೆ ಈ ಘಟನೆ ನಡೆದಿದ್ದು, ರಮೇಶ್ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ.
ಇದನ್ನೂ ಓದಿ: Panjab: ಭಿಕ್ಷೆ ಬೇಡುವ ಮಕ್ಕಳ DNA ಪರೀಕ್ಷೆಗೆ ಸರ್ಕಾರ ಆದೇಶ – ಕಾರಣ ಹೀಗಿದೆ
Comments are closed.