India: ರಷ್ಯಾ ಮಹಿಳೆ, ಮಕ್ಕಳನ್ನು ನೋಡಲು ಭಾರತಕ್ಕೆ ಬಂದ ಇಸ್ರೇಲ್ ಪ್ರಿಯಕರನಿಗೆ ನಿರಾಶೆ!

Share the Article

India: ಗೋಕರ್ಣದ ರಾಮೇಶ್ವರ ಗುಹೆಯಲ್ಲಿ ಪತ್ತೆಯಾಗಿದ್ದ ರಷ್ಯಾ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ನೋಡಲು ಬಂದ ರಷ್ಯಾ ಮಹಿಳೆಯ ಬಾಯ್ ಫ್ರೆಂಡ್ ಇಸ್ರೇಲ್ ನ ಡ್ರೋರ್ ಬರಿಗೈಯಲ್ಲಿ ವಾಪಾಸಾಗಿದ್ದಾನೆ.

ಇಸ್ರೇಲ್ ಮೂಲದ ಡ್ರೋರ್ ಗುಹೆಯಲ್ಲಿ ಪತ್ತೆಯಾಗಿದ್ದ ಇಬ್ಬರು ಮಕ್ಕಳು ಹಾಗೂ ಮಾಜಿ ಲಿವಿನ್ ಗೆಳತಿ ರಕ್ಷಣೆ ಸಂಬಂಧ ವಿಚಾರ ತಿಳಿದು ಭಾರತಕ್ಕೆ ಬಂದಿದ್ದ. ಹೀಗೆ ಬಂದ ಆತನಿಗೆ ಮಕ್ಕಳು ತುಮಕೂರಿನಲ್ಲಿರುವ ವಿಚಾರ ತಿಳಿದು ಗುರುವಾರ ಸಂಜೆ ಮಕ್ಕಳನ್ನು ನೋಡಲು ಬಂದಿದ್ದ. ಆದರೆ ಮೇಲಧಿಕಾರಿಗಳ ಅನುಮತಿ ಪಡೆದು ಬರುವಂತೆ ಎಫ್ ಡಿಸಿ ಸಿಬ್ಬಂದಿ ಹೇಳಿದ್ದರಿಂದ ಬರಿಗೈಯಲ್ಲಿ ವಾಪಾಸಾಗಿದ್ದಾನೆ.

ಮಕ್ಕಳಿಗೆ ನೀಡಲು ಗಿಫ್ಟ್ ನೊಂದಿಗೆ ಬಂದಿದ್ದ ಡ್ರೋರ್ ಗೆ ಅನುಮತಿ ನಿರಾಕರಿಸಿದ್ದರಿಂದ ದೂರದಿಂದಲೇ ಫಾರಿನ್ ಡಿಟೆನ್ಷನ್ ಸೆಂಟರ್ ನ ಕಿಟಕಿಯಲ್ಲಿ ಮಕ್ಕಳಿಗೆ ಹಾಯ್ ಹೇಳಿ ಬರಿಗೈನಲ್ಲಿ ವಾಪಾಸ್ ಆಗಿದ್ದಾನೆ.

ಈತನ ಮಾಜಿ ಲಿವಿನ್ ಗೆಳತಿ ನೀನಾಗೆ ಪ್ರಕೃತಿಯ ಮೇಲೆ ಪ್ರೀತಿಯಂತೆ. ಹೀಗಾಗಾಗಿಯೇ ಆಕೆ ಗೋಕರ್ಣದ ಗುಹೆಯಲ್ಲಿ ವಾಸವಿದ್ದಳು ಎನ್ನುತ್ತಾನೆ ಡ್ರೋರ್. ತನ್ನ ಮಕ್ಕಳನ್ನು ತನ್ನ ದೇಶಕ್ಕೆ ಕರೆದೊಯ್ಯುವ ಆಸೆ ಇದ್ದರೂ ಇಸ್ರೇಲ್ ನಲ್ಲಿ ಯುದ್ಧ ಕಾರಣದಿಂದ ಅದು ಸಾಧ್ಯವಾಗಿಲ್ಲ ಎನ್ನುತ್ತಾನೆ. ತಾಯಿ ಜೊತೆ ಮಕ್ಕಳಿರಬೇಕು ಎಂದ ಡ್ರೋರ್ ತಾಯಿ ಒಪ್ಪಿಗೆ ಇಲ್ಲದೆ ಮಕ್ಕಳನ್ನು ಕರೆದೊಯ್ಯುವುದಿಲ್ಲ ಎಂದಿದ್ದಾನೆ. ಅಲ್ಲದೇ ಮಕ್ಕಳ ಭೇಟಿಗೆ ಮತ್ತೆ ಪ್ರಯತ್ನಿಸುವುದಾಗಿ ತಿಳಿಸಿದ್ದಾನೆ.

ಇದನ್ನೂ ಓದಿ: Crime: ಪೊಲೀಸ್ ಠಾಣೆ ಬಳಿ ಆರೋಪಿಯ ಬರ್ಬರ ಹತ್ಯೆ!

Comments are closed.