F-35 jet: ಯಾರಿಗುಂಟು? ಯಾರಿಗಿಲ್ಲ? – F-35 ಪಾರ್ಕಿಂಗ್‌ನಿಂದ ದಿನಕ್ಕೆ ₹26,261 ಗಳಿಸುತ್ತಿರುವ ತಿರುವನಂತಪುರಂ ವಿಮಾನ నిಲ್ದಾಣ

F-35 jet: ಜೂನ್ 14ರಂದು ತುರ್ತು ಲ್ಯಾಂಡಿಂಗ್ ನಂತರ ಅಲ್ಲಿಯೇ ನಿಲ್ಲಿಸಲಾದ ಯುಕೆಯ ಎಫ್-35ಬಿ ಫೈಟರ್ ಜೆಟ್‌ನಿಂದಾಗಿ ತಿರುವನಂತಪುರಂ ವಿಮಾನ ನಿಲ್ದಾಣವು ಪಾರ್ಕಿಂಗ್ ಶುಲ್ಕವಾಗಿ ದಿನಕ್ಕೆ ₹26,261 ಗಳಿಸುತ್ತಿದೆ ಎಂದು ಸಿಎನ್‌ಬಿಸಿ-ಟಿವಿ 18 ವರದಿ ಮಾಡಿದೆ. ಈ ಅಂದಾಜಿನ ಪ್ರಕಾರ, ಜೂನ್ 14 ರಿಂದ 33 ದಿನಗಳವರೆಗೆ ಪಾರ್ಕಿಂಗ್ ಶುಲ್ಕ ಸುಮಾರು ₹8.6 ಲಕ್ಷ ತಲುಪಿದೆ.

ತುರ್ತು ಭೂಸ್ಪರ್ಶದ ನಂತರ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಬ್ರಿಟಿಷ್ ಎಫ್ -35 ಬಿ ಫೈಟರ್ ಜೆಟ್ ಅನ್ನು ಈ ವಾರ ಯುಕೆಗೆ ಹಿಂತಿರುಗುವ ನಿರೀಕ್ಷೆಯಿರುವ ಜೆಟ್ ಅನ್ನು ಪರಿಶೀಲಿಸಲು 24 ಸದಸ್ಯರ ರಾಯಲ್ ಏರ್ ಫೋರ್ಸ್ ತಂಡ ಜುಲೈ 6ರಂದು ಕೇರಳಕ್ಕೆ ಆಗಮಿಸಿದೆ. ಪರಿಶೀಲಿಸಲು ಮತ್ತು ನಿರ್ಣಯಿಸಲು ಬ್ರಿಟಿಷ್ ರಾಯಲ್ ಏರ್ ಫೋರ್ಸ್‌ನ 24 ಜನರ ತಂಡ ಜುಲೈ 6 ರಂದು ತಿರುವನಂತಪುರಂಗೆ ಆಗಮಿಸಿತು.
14 ತಾಂತ್ರಿಕ ತಜ್ಞರು ಮತ್ತು 10 ಸಿಬ್ಬಂದಿ ಸದಸ್ಯರನ್ನು ಒಳಗೊಂಡ ತಂಡವು, ಸಿಕ್ಕಿಬಿದ್ದ ಜೆಟ್ ಅನ್ನು ಸ್ಥಳೀಯವಾಗಿ ದುರಸ್ತಿ ಮಾಡಬಹುದೇ ಅಥವಾ ಅದನ್ನು ಕಿತ್ತುಹಾಕಿ ಯುನೈಟೆಡ್ ಕಿಂಗ್‌ಡಮ್‌ಗೆ ಸಾಗಿಸಬೇಕೇ ಎಂಬ ಬಗ್ಗೆ ಇನ್ನು ಪರೀಕ್ಷೆ ನಡೆಸುತ್ತಿದೆ ತಜ್ಞರ ತಂಡ.
$110 ಮಿಲಿಯನ್‌ಗಿಂತಲೂ ಹೆಚ್ಚು ಮೌಲ್ಯದ ಈ ಜೆಟ್ ವಿಶ್ವದ ಅತ್ಯಂತ ಮುಂದುವರಿದ ಯುದ್ಧ ವಿಮಾನಗಳಲ್ಲಿ ಒಂದಾಗಿದೆ. ವಿಮಾನವು ಕೇರಳ ಕರಾವಳಿಯಿಂದ 100 ನಾಟಿಕಲ್ ಮೈಲು ದೂರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ, ತಾಂತ್ರಿಕ ಸಮಸ್ಯೆಯಿಂದಾಗಿ ಜೂನ್ 14 ರಂದು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.
ಬ್ರಿಟನ್‌ನ ರಾಯಲ್ ನೇವಿ ಒಡೆತನದ ಎಫ್-35ಬಿ ಜೆಟ್ ಅನ್ನು ಸಾಗಣೆಗಾಗಿ ಡಿಸ್ಅಸೆಂಬಲ್ ಮಾಡಬೇಕಾಗಬಹುದು ಅಥವಾ ಸಿ-17 ಗ್ಲೋಬ್‌ಮಾಸ್ಟರ್‌ನಂತಹ ದೊಡ್ಡ ವಿಶೇಷ ವಿಮಾನವನ್ನು ಬಳಸಿ ಒಂದೇ ತುಂಡಾಗಿ ತೆಗೆದುಕೊಂಡು ಹೋಗಬೇಕಾಗಬಹುದು.
Comments are closed.