Bengaluru: 40 ಲಕ್ಷ ವಹಿವಾಟು ದಾಟಿದ ಆರು ಸಾವಿರ ಮಾಲೀಕರಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್!

Bengaluru: ಕರ್ನಾಟಕ ಸರ್ಕಾರ ವಾಣಿಜ್ಯ ತೆರಿಗೆ ಹೆಚ್ಚುವರಿ ಆಯುಕ್ತ ಚಂದ್ರಶೇಖರ್ ನಾಯಕ್ 40 ಲಕ್ಷ ರೂ. ವಹಿವಾಟು ನಡೆಸಿದ 6 ಸಾವಿರ ರೂ. ಮಂದಿಗೆ ನೋಟಿಸ್ ನೀಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು ಕಳೆದ 2021 ರಿಂದ 2024 ವರೆಗಿನ 40 ಸಾವಿರ ಯುಪಿಐ ದಾಖಲೆಯನ್ನು ಕಲೆ ಹಾಕಿ ಅದರಲ್ಲಿ 40 ಲಕ್ಷ ವಹಿವಾಟು ದಾಟಿದ ಆರು ಸಾವಿರ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಹಾಲು, ಬ್ರೆಡ್ ಮಾರಾಟ, ತರಕಾರಿ ಮಾರಾಟದ ಬಗ್ಗೆ ದಾಖಲೆ ನೀಡಿದರೆ ಖಂಡಿತ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ. ಉಳಿದಂತೆ 40 ಲಕ್ಷ ರೂ. ವಹಿವಾಟು ಹೆಚ್ಚಾದರೆ ವಾರ್ಷಿಕವಾಗಿ ಜಿಎಸ್ಟಿ ನೋಂದಣಿ ಮಾಡಿಕೊಳ್ಳಬೇಕು. ಕಂಪೋಸಿಷನ್ ಟ್ಯಾಕ್ಸ್ ಅಡಿ 1% ಕೂಡ ಕಟ್ಟುವ ಅವಕಾಶ ಇದೆ ಎಂದು ತಿಳಿಸಿದರು.
ಹೂ ಹಣ್ಣು, ಹಾಲು ಸೇರಿ ಮೊದಲಾದವು ಜಿಎಸ್ಟಿಯಿಂದ ಹೊರಗಡೆ ಇದೆ. ಇವರಿಗೆ ನೋಟಿಸ್ ಬಂದಿದ್ದರೆ ಆ ವ್ಯಾಪಾರಿಗಳು ಸ್ಪಷ್ಟಿಕರಣ ನೀಡಬಹುದು. ಸರಕು ಖರೀದಿ ವೇಳೆ ಜಿಎಸ್ಟಿ ಪಾವತಿ ಮಾಡಿದ್ದರೆ ಮಾರಾಟದಲ್ಲಿ ಜಿಎಸ್ಟಿ ಪಾವತಿಸಬೇಕಾದ ಅವಶ್ಯಕತೆ ಇರುವುದಿಲ್ಲ. ಆದ್ರೆ ಬೇಕಾದ ದಾಖಲೆಗಳನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Denotifications of Yediyurappa : ಯಡಿಯೂರಪ್ಪ, ಕುಮಾರಸ್ವಾಮಿ ಅವಧಿಯ 29 ಡಿನೋಟಿಫಿಕೇಶನ್ ರದ್ದು
Comments are closed.