Fire Accident: ಇರಾಕ್‌ನ ಶಾಪಿಂಗ್ ಮಾಲ್‌ನಲ್ಲಿ ಭೀಕರ ಅಗ್ನಿ ಅವಘಡ: 60 ಮಂದಿ ಸಜೀವ ಸಾವು, ಹಲವರಿಗೆ ಗಾಯ

Share the Article

Fire Accident: ಇರಾಕ್‌ನ ಅಲ್-ಕುಟ್ ನಗರದ ಶಾಪಿಂಗ್‌ ಮಾಲ್‌ನಲ್ಲಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎಂದು ರಾಯಿಟರ್ಸ್ ಗುರುವಾರ ವರದಿ ಮಾಡಿದೆ. ಐದು ಅಂತಸ್ತಿನ ಕಟ್ಟಡದ ದೊಡ್ಡ ಭಾಗ ಬೆಂಕಿಗೆ ಆಹುತಿಯಾಗಿದ್ದು, ಹೊಗೆ ಹೊರಬರುತ್ತಿರುವುದನ್ನು ದೃಶ್ಯಗಳು ತೋರಿಸಿವೆ. ಬೆಂಕಿಯ ಕಾರಣ ಏನೆಂದು ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ನಗರದ ಗವರ್ನರ್ ಹೇಳಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಬಾಗ್ದಾದ್‌ನಿಂದ 160 ಕಿಲೋಮೀಟರ್ ಆಗ್ನೇಯದಲ್ಲಿರುವ ನಗರದ ಆಸ್ಪತ್ರೆಯ ಹಾಸಿಗೆಗಳು ತುಂಬಿದ್ದು, ಆಂಬ್ಯುಲೆನ್ಸ್ಗಳು ಇನ್ನೂ ಗಾಯಾಳುಗಳನ್ನು ಸ್ಥಳದಿಂದ ಸ್ಥಳಾಂತರಿಸುತ್ತಿವೆ. ಮಾಲ್ ಕೇವಲ ಐದು ದಿನಗಳ ಹಿಂದೆಯಷ್ಟೇ ತೆರೆದಿತ್ತು ಎಂದು ಎಎಫ್‌ಪಿ ವರದಿ ಮಾಡಿದೆ. ಆರಂಭಿಕ ತನಿಖೆಯ ಪ್ರಕಾರ ಬೆಂಕಿ ಮೊದಲ ಮಹಡಿಯಲ್ಲಿ ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ. ಸುಟ್ಟ ದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂದು ಎಎಫ್‌ಪಿ ತಿಳಿಸಿದೆ.

ರಾಜ್ಯಪಾಲರು ಪ್ರಾಂತ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಿದ್ದು, ಅಧಿಕಾರಿಗಳು ಕಟ್ಟಡ ಮತ್ತು ಮಾಲ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.

Comments are closed.