Google Map: ಗೂಗಲ್ ಮ್ಯಾಪ್ನಲ್ಲಿ ಊರ ಹೆಸರುಗಳು ಇಂಗ್ಲಿಷ್ನಲ್ಲಿ ಸರಿ ಇದೆ, ಕನ್ನಡದಲ್ಲಿ ಎಡವಟ್ಟು – ಪುರುಷೋತ್ತಮ ಬಿಳಿಮಲೆ ಕುಟುಕಿದ ಮಾಜಿ ಸಿಎಂ

Share the Article

Google Map: ಇತ್ತೀಚೆಗೆ ಗೋಗಲ್ ಮ್ಯಾಪ್ ಒಂದಿದ್ದರೆ ಎಲ್ಲಿಗು ಬೇಕಾದ್ರು ಹೋಗಿ ಬರಬಹುದು. ಯಾರನ್ನು ವಿಲಾಸ ಕೇಳುವ ಪ್ರಮೇಯವೇ ಬರೋದಿಲ್ಲ. ಆದರೆ ಗೋಗಲ್ನಲ್ಲಿ ಕನ್ನಡದಲ್ಲಿ ನಮೂದಿಸಿರುವ ಹೆಸರುಗಳು ಮಾತ್ರ ತಪ್ಪು ತಪ್ಪಾಗಿ ಇದೆ. ಈ ಎಡವಟ್ಟಿನ ಬಗ್ಗೆ ಮಾಜಿ ಸಿಎಂ ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕನ್ನಡ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯನ್ನು ಈ ತಪ್ಪಿನ ಬಗ್ಗೆ ಮಾಜಿ ಸಿಎಂ ಸದಾನಂದ ಗೌಡ ಕುಟುಕಿದ್ದಾರೆ. ಇಂದು ಬೆಳಿಗ್ಗೆ ಊರಿನ ಮಿತ್ರರೊಬ್ಬರು ಈ ಸ್ಕ್ರೀನ್‌ಶಾಟ್ ಕಳುಹಿಸಿದ್ದರು. ಗೂಗಲ್ ಮ್ಯಾಪ್‌ನಲ್ಲಿ ಊರಿನ ಹೆಸರುಗಳು ಇಂಗ್ಲಿಷ್ನಲ್ಲಿ ಸರಿಯಾಗಿ ಇದೆ, ಆದರೆ ಕನ್ನಡ ಅನುವಾದ ಗೊಂದಲಕಾರಿಯಾಗಿದೆ.
ಬಂಡಾಜೆ → ಬ್ಯಾಂಡೇಜ್,
ನಾಣಿಲ → ನಾನಿಲ್ಲ!

ಆಶ್ಚರ್ಯವೆಂದರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇದೇ ಪಕ್ಕದ ಊರಿನವರು! ಆದರೆ ಊರಿನ ಹೆಸರುಗಳೆಲ್ಲಾ ತಪ್ಪು ತಪ್ಪಾಗಿದ್ರು ಇದು ಅವರ ಗಮನಕ್ಕೆ ಬಂದಿಲ್ಲ ಎಂದು ಕುಟುಕಿದ್ದಾರೆ.

Comments are closed.