Karavara: ಏಕಾಏಕಿ ಭೋರ್ಗರೆದ ಜಲಪಾತದಲ್ಲಿ ಸಿಲುಕಿದ ಪ್ರವಾಸಿಗರು: ಮೂವರ ರಕ್ಷಣೆ

Share the Article

Karvara: ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕಳೆದ 3 ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಜಿಲ್ಲಾಡಳಿತ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದರೂ ಕೂಡ ಜಲಪಾತ ವೀಕ್ಷಣೆಗೆಂದು ಬಂದಿದ್ದ ಪ್ರವಾಸಿಗರು ನೀರಿನ ಅಬ್ಬರಕ್ಕೆ ಸಿಲುಕಿ ಪರದಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಬಳಿಯಿರುವ ಜಲಪಾತವೊಂದರ ವೀಕ್ಷಣೆಗೆಂದು ಬಂದಿದ್ದ ಹುಬ್ಬಳ್ಳಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ನೀರಿನಲ್ಲಿ ಸಿಲುಕಿದ್ದು, ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ.

ಕಲ್ಲು ಬಂಡೆಗಳು ಹಾಗೂ ಮರಗಳ ನಡುವೆ ಕುಳಿತು ಪ್ರಾಣಾಪಾಯದಿಂದ ಪಾರಾಗಿದ್ದು, ಮಳೆಯ ಅಬ್ಬರ ಕಡಿಮೆಯಾದ ನಂತರ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರು ಮೂವರು ಯುವಕರನ್ನು ರಕ್ಷಣೆ ಮಾಡಿದ್ದಾರೆ.

Comments are closed.