Teertahalli: ಕ್ರಿಕೆಟ್ ನಲ್ಲಿ ತೀರ್ಥಹಳ್ಳಿ ಹುಡುಗನ ಸಾಧನೆ- ಐಪಿಎಲ್, ಭಾರತ ತಂಡಕ್ಕೆ ಆಯ್ಕೆ ಸಾಧ್ಯತೆ

Share the Article

Teertahalli: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಯುವಕನೊಬ್ಬ ಕ್ರಿಕೆಟ್ ನಲ್ಲಿ ಸಾಧನೆ ಮಾಡಿದ್ದು ಇದೀಗ ಕರ್ನಾಟಕ ಪ್ರೀಮಿಯರ್ ಲೀಗ್ ನಲ್ಲಿ ಆಡಲು ಹುಬ್ಬಳ್ಳಿ ತಂಡಕ್ಕೆ ಆಯ್ಕೆಯಾಗಿದ್ದಾನೆ.

ನಿತಿನ್ ಅವರು ಮೂಲತಃ ತೀರ್ಥಹಳ್ಳಿ ತಾಲೂಕಿನ ಆರಗ ಮೂಲದ ಶಾಂತವೇರಿಯವರು. ತಂದೆ ನಾಗರಾಜ, ತಾಯಿ ಗಾಯತ್ರಿ, ಸಹೋದರಿ ನೇಹಾ. ತೀರ್ಥಹಳ್ಳಿಯ ಅಬ್ದುಲ್ ಕಲಾಂ ಅವರ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಯಲ್ಲಿ ತರಬೇತಿ ಪಡೆದ ಆರಗ ಶಾಂತವೇರಿ ಗ್ರಾಮದ ನಿತಿನ್ ಕರ್ನಾಟಕ ಪ್ರೀಮಿಯರ್ ಲೀಗ್ (KPL ) ಆಯ್ಕೆಯಾಗಿದ್ದಾರೆ.

ನಿತಿನ್ ಅವರನ್ನು ಕಳೆದ ಬಾರಿಯ ಕೆಪಿಎಲ್ ವಿನ್ನಿಂಗ್ ತಂಡವಾದ ಹುಬ್ಬಳ್ಳಿ ಟೈಗರ್ಸ್ ಬಿಡ್ ಮಾಡಿ ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದು ಅತ್ಯುತ್ತಮ ಕ್ರಿಕೆಟ್ ಕ್ರೀಡಾ ಪಟುವಾಗಿರುವ ನಿತಿನ್ ಕೆಪಿಎಲ್ ನಲ್ಲಿ ಚೆನ್ನಾಗಿ ಆಟವಾಡಿದರೆ ಐಪಿಎಲ್ ಕದ ತಟ್ಟುವ ಸಾಧ್ಯತೆ ಕೂಡ ಹೆಚ್ಚಿದೆ.ಈತನ ಸಾದನೆಯನ್ನು ಪೋಷಕರು,ಸ್ನೇಹಿತರು, ಅಭಿಮಾನಿಗಳು, ಪಟ್ಟಣದ ಸಾರ್ವಜನಿಕರು ಪ್ರಶಂಶಿಸಿ ಶುಭ ಕೋರಿದ್ದಾರೆ.

Comments are closed.