Election: ಬಿಹಾರದಲ್ಲೂ ಗ್ಯಾರಂಟಿ ಘೋಷಣೆ: ಉಚಿತ ವಿದ್ಯುತ್ ಎಂದ ನಿತೀಶ್ ಕುಮಾರ್

Bihar: ಬಿಹಾರದಲ್ಲಿ ಮುಂಬರುವ ಚುನಾವಣೆಗೆ ಬಾರಿ ತಯಾರಿ ನಡೆಯುತ್ತಿದ್ದು, ಸಿಎಂ ನಿತೀಶ್ ಕುಮಾರ್ ಉಚಿತ ಭಾಗ್ಯದ ಘೋಷಣೆಯೊಂದನ್ನು ಮಾಡಿದ್ದಾರೆ.

ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಇದ್ದು, ಇದೀಗ ಸಿಎಂ ಜನರಿಗೆ ಬಂಪರ್ ಸುದ್ದಿ ನೀಡಿದ್ದಾರೆ. ಆಗಸ್ಟ್ ಒಂದರಿಂದ ರಾಜ್ಯದ ಜನರಿಗೆ 125 ಯೂನಿಟ್ ವರೆಗೂ ಉಚಿತ ವಿದ್ಯುತ್ ಘೋಷಿಸಿದ್ದು, ಯಾವುದೇ ಬಿಲ್ ಪಾವತಿ ಮಾಡಬೇಕಿಲ್ಲ ಎಂದಿದ್ದಾರೆ.
ಈ ಯೋಜನೆ ಮೂಲಕ ರಾಜ್ಯದ 1.67 ಕೋಟಿ ಕುಟುಂಬಗಳು ಇದರ ಲಾಭ ಪಡೆಯಲಿದ್ದು ಮುಂದಿನ 3 ವರ್ಷಗಳ ಕಾಲ ಇದು ಮುಂದುವರೆಯುತ್ತದೆ ಎಂದಿದ್ದಾರೆ. ಸದ್ಯ ಈ ಹೊಸ ಯೋಜನೆ ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.
Comments are closed.