Raychur: ಗಂಡನನ್ನು ಹೆಂಡತಿ ನದಿಗೆ ತಳ್ಳಿದ ಪ್ರಕರಣ – ತಾತಪ್ಪನನ್ನ ನೀರಿಗೆ ತಳ್ಳೋಕೆ ಕಾರಣ 35 ವರ್ಷದ ದ್ವೇಷ ಕಾರಣ?

Raychur: ರಾಜ್ಯಾದ್ಯಂತ ಕೆಲವು ದಿನಗಳಿಂದ ಬಾರಿ ಸದ್ದು ಮಾಡುತ್ತಿರುವ ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದ ಘಟನೆ ನವದಂಪತಿ ತಾತಪ್ಪ ಮತ್ತು ಗದ್ದೆಮ್ಮ ಅವರ ವಿಚಾರ ಎಲ್ಲರ ಗಮನ ಸೆಳೆದಿದೆ. ಮದುವೆಯಾದ ಮೂರು ತಿಂಗಳಿಗೆ ಗಂಡನನ್ನು ಹೆಂಡತಿ ನದಿಗೆ ತಳ್ಳಿ ಸಾಯಿಸಲು ಪ್ರಯತ್ನಿಸಿದ ಘಟನೆ ಇದು ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವುದನ್ನು ನಾವು ನೋಡಬಹುದು. ಇದೀಗ ಈ ಗಂಡ-ಹೆಂಡತಿಯರಿಬ್ಬರೂ ವಿಚ್ಚೇದನ ಪಡೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಹೆಂಡತಿ ಈ ರೀತಿ ಕೃತ್ಯ ನಡೆಸಲು 35 ವರ್ಷಗಳ ಹಿಂದಿನ ದ್ವೇಷ ಕಾರಣ ಎನ್ನಲಾಗುತ್ತಿದೆ.

ಹೌದು, ತಾತಪ್ಪ ಮನೆಯವರು ಶಾಕಿಂಗ್ ನ್ಯೂಸ್ ಒಂದನ್ನ ಹೇಳಿದ್ದು ಇದು ನಿನ್ನೆ ಮೊನ್ನೆಯದ್ದಲ್ಲ, 35 ವರ್ಷಗಳ ದ್ವೇಷ ಎಂಬ ವಿಚಾರ ಹೇಳಿದ್ದಾರೆ. ಅಂದಹಾಗೆ ಗದ್ದೆಮ್ಮನಿಗೆ ಈ ಮದುವೆ ಇಷ್ಟವಿರಲಿಲ್ಲವಂತೆ. ಮೊದಲೇ ಹೇಳದೆ ಮದುವೆಯಾದ ಮೇಲೆ ಹೇಳಿದಕ್ಕೆ, ತಾತಪ್ಪ ಎಲ್ಲರ ಎದುರು ಮದುವೆ ನಡೆದೋಗಿದೆ, ಹೊಂದಿಕೊಂಡು ಬಾಳೋಣಾ ಎಂದು ಸುಮ್ಮನಾಗಿದ್ದನಂತೆ. ಇದೇ ಸಂದರ್ಭದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಕಳೆದ 35 ವರ್ಷದ ಹಿಂದೆ ಗದ್ದೆಮ್ಮ ಹಾಗೂ ತಾತಪ್ಪ ಫ್ಯಾಮಿಲಿಯ ನಡುವೆ ಮಾತುಕತೆ ಇರಲಿಲ್ಲ. ಆದರೆ ಈ ಸಂಬಂಧದಿಂದ ಎಲ್ಲವೂ ಸರಿಯಾಗಲಿ ಎಂದೇ ಎಲ್ಲರೂ ಭಾವಿಸಿ ಮದುವೆ ಮಾಡಿದ್ದರಂತೆ. ಆದರೆ ಈಗ ನೋಡಿದ್ರೆ ಪ್ರಾಣ ತೆಗೆದಯುವುದಕ್ಕೆ ಹೋಗಿದ್ದಾರೆಂದು ತಾತಪ್ಪ ಸಹೋದರ ಆರೋಪ ಮಾಡಿದ್ದಾರೆ.
ಇನ್ನು ಒಂದು ಹೆಣ್ಣಿನ ಬಾಳು ಹಾಳು ಮಾಡಬಾರದು ಎಂಬ ಕಾರಣಕ್ಕೆ ಕೇಸ್ ಮಾಡದೆ, ಆಕೆಯ ಮನೆಗೆ ಬಿಟ್ಟು ಬಂದಿದ್ದೀವಿ. ತಾತಪ್ಪನನ್ನು ನದಿಗೆ ತಳ್ಳಿದ ಗದ್ದೆಮ್ಮ, ಬ್ಯಾರೇಜ್ ಮೇಲೆ ನಿಂತು ಚಪ್ಪಲಿ ತೋರಿಸಿದ್ದಳಂತೆ. ಇದು ತಾತಪ್ಪನ ಮನಸ್ಸಿಗೆ ಬಹಳಷ್ಟು ನೋವು ತಂದಿದೆ. ಅದನ್ನು ಕ್ಷಮಿಸಿಬಿಡೋಣಾ. ಆದರೆ ನನ್ನ ಜೀವನ ತೆಗೆಯುವುದಕ್ಕೆ ಹೋಗಿದ್ದು ಎಷ್ಟು ಸರಿ ಎಂದಿದ್ದಾರೆ.
Comments are closed.