Non veg Milk: ಭಾರತ- ಅಮೆರಿಕ ನಡುವೆ ಜೋರಾಯ್ತು ‘ನಾನ್ ವೆಜ್ ಹಾಲು’ ವಿವಾದ – ‘ಮಾಂಸಾಹಾರಿ ಹಾಲು’ ಅಂದ್ರೆ ಏನು?

Share the Article

Non veg Milk: ಅಮೆರಿಕಾ ಭಾರತಕ್ಕೆ ತಮ್ಮ ಡೈರಿ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ ಮೊದಲಾದವುಗಳನ್ನು ನೇರವಾಗಿ ರಫ್ತು ಮಾಡಲು ಬಯಸುತ್ತಿದೆ. ಆದರೆ ಭಾರತ ಮಾತ್ರ ಇದಕ್ಕೆ ಒಪ್ಪು ಗೊಡುತ್ತಿಲ್ಲ. ಕಾರಣ ಅಮೆರಿಕ ಕಳಿಸಲು ಮುಂದಾಗಿರುವುದು ನಾನ್ ವೆಜ್ ಹಾಲು. ಅರ್ಥಾತ್ ಮಾಂಸಹಾರಿಹಾಲು. ಭಾರತದಲ್ಲಿ ಹೈನುಗಾರಿಕೆ ಮಾತ್ರವಲ್ಲದೆ, ಸಂಸ್ಕೃತಿ ಹಾಗೂ ಧರ್ಮಕ್ಕೂ ಹಸುವಿಗೆ ವಿಶೇಷ ಸ್ಥಾನವಿದೆ. ಇಲ್ಲಿನ ಜನರು ಹಸುವನ್ನು ಗೋ ಮಾತೆ ಎಂದು ಪೂಜಿಸುತ್ತಾರೆ. ಹೀಗಾಗಿ, ಹಸುವಿನ ಹಾಲಿಗೆ ಭಾರೀ ಪವಿತ್ರತೆ ಇದೆ. ಹೀಗಾಗಿಯೇ ಭಾರತ ಮಾಂಸಾಹಾರಿ ಹಾಲನ್ನು ಆಮದು ಮಾಡಿಕೊಳ್ಳಲು ಒಪ್ಪಿಕೊಳ್ಳುತ್ತಿಲ್ಲ. ಹಾಗಾದರೆ ಮಾಂಸಾಹಾರಿಹಾಲು ಅಂದರೆ ಏನು? ಇಲ್ಲಿದೆ ನೋಡಿ ಡೀಟೇಲ್ಸ್.

ಭಾರತದೊಂದಿಗೆ ಏರ್ಪಡುತ್ತಿರುವ ಹಲವು ಒಪ್ಪಂದಗಳ ಪೈಕಿ ಅಮೆರಿಕ, ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕುರಿತ ಬೇಡಿಕೆಯೊಂದನ್ನು ಇರಿಸಿದೆ. ಅಮೆರಿಕದ ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆ ಮುಕ್ತವಾಗಿಸಲು ಭಾರತ ಹಿಂದೇಟು ಹಾಕಿದೆ. ಭಾರತೀಯರು ಮಾಂಸಹಾರಿ ಹಾಲಿನ ಉತ್ಪನ್ನ ಸ್ವೀಕರಿಸಲ್ಲ. ಬೇಕಿದ್ರೆ ಸಸ್ಯಹಾರಿ ಹಾಲನ್ನು ಮಾತ್ರ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡುವದಾಗಿ ಭಾರತ ಹೇಳಿದೆ. ಸದ್ಯ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಮಾಂಸಾಹಾರಿ ಮತ್ತು ಸಸ್ಯಹಾರಿ ಹಾಲು ಏನು ಎಂಬುದರ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ.

ನಾನ್ ವೆಜ್ ಹಾಲು ಎಂದರೆ ಏನು?
ಆದ್ರೆ ಅಮೆರಿಕಾದಲ್ಲಿ ನಾನ್ ವೆಜ್ ತಿನ್ನುವ ಹಸುಗಳಿವೆ. ಈ ನಾನ್ ವೆಜ್ ಹಸುಗಳು ಬೇರೆ ಹಸುಗಳ ರಕ್ತವನ್ನು ಸಹ ಕುಡಿಯುತ್ತವೆ. ಜೊತೆಗೆ ಅಮೆರಿಕಾದ ಹಸುಗಳು ಮಾಂಸ ತಿನ್ನುತ್ತವೆ. ಈ ಆಹಾರದ ಜೊತೆಯಲ್ಲಿ ಹಂದಿ ಮತ್ತು ಕುದುರೆಯ ರಕ್ತ, ಕೊಬ್ಬು ಮತ್ತು ಪ್ರೋಟೀನ್ ಸಹ ನೀಡಲಾಗುತ್ತದೆ. ಈ ವಿಧಾನ ವೆಚ್ಚದಾಯಕದ ಜೊತೆ ಪರಿಣಾಮಕಾರಿಯೂ ಆಗಿದೆ. ಹೀಗಾಗಿ ಇವುಗಳನ್ನು ನಾನ್ ವೆಜ್ ಹಸುಗಳು ಅಂತಾನೇ ಕರೆಯಲಾಗುತ್ತೆ. ಆದರೆ ಭಾರತದಲ್ಲಿ ಹಸುಗಳಿಗೆ ಈ ರೀತಿಯಾದ ಆಹಾರ ನೀಡಲ್ಲ. ಹಾಗಾಗಿ ಅಮೆರಿಕದ ಹಾಲನ್ನು ಮಾಂಸಾಹಾರಿ ಎಂದು ಕರೆಯಲಾಗುತ್ತಿದೆ.

ಇನ್ನು ಭಾರತದಲ್ಲಿ ಹಾಲು ಮತ್ತು ತುಪ್ಪ ದೈನಂದಿನ ಜೀವನ ಮತ್ತು ಆಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಾಂಸ ಮತ್ತು ರಕ್ತ ಸೇವಿಸಿದ ಹಸುವಿನ ಹಾಲಿನಿಂದ ತಯಾರಿಸಿದ ತುಪ್ಪವನ್ನು ಭಾರತೀಯರು ಒಪ್ಪಿಕೊಳ್ಳಲ್ಲ ಎಂಬುವುದು ಕೇಂದ್ರ ಸರ್ಕಾರದ ನಿಲುವು ಆಗಿದೆ. ಮಾಂಸಹಾರ ಸೇವಿಸುವ ಹಾಲಿನ್ನು ಧಾರ್ಮಿಕ ಆಚರಣೆಗಳಲ್ಲಿಯೂ ಬಳಕೆಯಾಗಲ್ಲ. ಇದು ಭಾರತೀಯರ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದಂತಾಗುತ್ತದೆ ಎಂದು ಅಮೆರಿಕಾಗೆ ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ.

Comments are closed.