Vnadana Rai: ಮಕ್ಳಳ ‘ಫೇವರೆಟ್ ಟೀಚರ್’ ಮೇಲೆ ನೆಟ್ಟಿಗರ ಆಕ್ರೋಶ – ಕ್ಷಮೆ ಕೇಳಿ ‘ಆ’ ವಿಡಿಯೋ ಡಿಲೀಟ್ ಮಾಡಿದ ವಂದನಾ ರೈ !!

Vandana Rai: ಶಾಲೆಯಲ್ಲಿ ಮಕ್ಕಳಿಗೆ ಕಲಿಸುವ ಜೊತೆಗೆ ಅವರನ್ನು ನಾಲಿಸುತ್ತಾ, ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವಿಡಿಯೋಗಳನ್ನು ಅಪ್ಲೋಡ್ ಮಾಡಿ ಮಕ್ಕಳ ‘ಫೇವರೆಟ್ ಟೀಚರ್’ ಎಂದೆ ಪ್ರಸಿದ್ಧಿ ಪಡೆದಿದ್ದ ವಂದನ ಟೀಚರ್ ಮೇಲೆ ಇದೀಗ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ವಂದನ ರೈ ಅವರು ಎಲ್ಲರ ಬಳಿ ಕ್ಷಮೆ ಕೇಳಿ ‘ಆ’ ವಿಡಿಯೋ ಡಿಲೀಟ್ ಮಾಡಿದ್ದಾರೆ.

ಹೌದು, ಮಕ್ಕಳೊಂದಿಗೆ ನೃತ್ಯ ಮಾಡುತ್ತಾ ಆಟದ ಜೊತೆ ಪಾಠ ಮಾಡುವ ರೀಲ್ಸ್ ವೀಡಿಯೋ ಮೂಲಕ ಅಪಾರ ಅಭಿಮಾನಿಗಳ ಹೊಂದಿರುವ ಉಡುಪಿಯ ಶಿಕ್ಷಕಿ ವಂದನ ರೈ ಇತ್ತೀಚೆಗೆ ತಮ್ಮ ವಿದ್ಯಾರ್ಥಿಗಳನ್ನು ಮೊಬೈಲ್ ಎಡಿಕ್ಷನ್ನಿಂದ ಹೇಗಾದರೂ ದೂರ ಮಾಡಬೇಕೆನ್ನುವ ಸದುದ್ದೇಶದಿಂದ ಶಾಲೆಯಲ್ಲಿ ಒಂದು ಸಣ್ಣ ಸ್ಕಿಟ್ ಮಾಡಿದ್ದರು. ವಿದ್ಯಾರ್ಥಿನಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಮೊಬೈಲ್ ನೋಡಿ ನೋಡಿ ಈ ಬಾಲಕಿಯ ಕಣ್ಣು ಹೇಗೆ ಹೋಗಿದೆ ನೋಡಿ ಅಂತ ಉಳಿದ ಮಕ್ಕಳಲ್ಲಿ ಭಯದ ಮೂಲಕವಾದ್ರೂ ಮೊಬೈಲ್ ಎಡಿಕ್ಷನ್ ನಿಂದ ತಮ್ಮ ವಿದ್ಯಾರ್ಥಿಗಳನ್ನು ದೂರವಿಡಲು ತರಗತಿಯಲ್ಲಿ ಮಾಡಿದ ಜಾಗೃತಿ ವೀಡಿಯೋಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಜೊತೆಗೆ ಇದು ವಿವಾದಕ್ಕೆ ಕೂಡ ಕಾರಣವಾಗಿತ್ತು.
ಈ ಬೆನ್ನಲ್ಲೇ ಶಿಕ್ಷಕಿ ವಂದನಾ ರೈ ವೀಡಿಯೋ ಡಿಲಿಟ್ ಮಾಡುವ ಮೂಲಕ ಕ್ಷಮೆ ಕೂಡ ಕೇಳಿದ್ದಾರೆ. ಕ್ಷಮೆ ಕೇಳಿದ ವಂದನಾ ರೈ ಪರ ಹಲವರು ಶ್ಲಾಘನೀಯ ಕಮೆಂಟ್ ಕೂಡ ಮಾಡಿದ್ದಾರೆ. ವಂದನಾ ರೈ ತಮ್ಮ ಜಾಗೃತಿ ವೀಡಿಯೋ ಬಗ್ಗೆ ಕ್ಷಮೆ ಕೇಳುವುದರ ಜೊತೆ ತಾನು ಮಾಡಿದ ವೀಡಿಯೋ ತಲುಪುವವರಿಗೆ ತಲುಪಿದೆ. ನಾನು ಇರೋದೇ ಮಕ್ಕಳಿಗಾಗಿ ಎಂದು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಬೇಸರ ಹೊರಹಾಕಿದ್ದಾರೆ.
ವಂದನ ರೈ ಮಾಡಿದ ಪೋಸ್ಟ್:
ತಾಳಿದವನು ಬಾಳಿಯಾನು!!!
ನನ್ನ ತಪ್ಪನ್ನು ಪ್ರೀತಿಯ ಸಂದೇಶದ ಮೂಲಕ ನನ್ನ ಗಮನಕ್ಕೆ ತಂದ P V Bhandary ಸರ್ ಇವರಿಗೆ ಖಂಡಿತ ನಾನು ಗೌರವ ಕೊಡುತ್ತೇನೆ. ಅದು ಬಿಟ್ಟು ನನ್ನನ್ನು ಬಂಡವಾಳವಾಗಿಟ್ಟುಕೊಂಡು ಗೀಚಿದವರಿಗೆ ಖಂಡಿತ ನಾನು ಯಾವತ್ತೂ ತಲೆ ಬಾಗುವುದಿಲ್ಲ.
ನಾನು ಇರೋದೇ ನನ್ನ ಮಕ್ಕಳಿಗೋಸ್ಕರ. ಇನ್ನು ಮುಂದೆ ನಾನು ಬದುಕುವುದು ಹೀಗೆಯೇ. ನನ್ನೊಂದಿಗೆ ಜೊತೆ ನಿಂತ ಎಲ್ಲರಿಗೂ ಮನದಾಳದ ಧನ್ಯವಾದಗಳ ನ್ನು ಸಮರ್ಪಿಸುತ್ತಿದ್ದೇನೆ. ನಾವು ಮೊಬೈಲ್ ಅವರ್ನೆಸ್ ಬಗ್ಗೆ ಮಾಡಿದ ವಿಡಿಯೋಗೆ ಅಂತಿಮ ಚುಕ್ಕಿ ನೀಡಿ ಆಗಿದೆ. ಯಾರ ಗಮನಕ್ಕೆ ತರಬೇಕು ಅವರಿಗೆ ತಂದಾಗಿದೆ. ತಪ್ಪು ಎಲ್ಲರೂ ಮಾಡುತ್ತಾರೆ. ಅದನ್ನು ಹೇಳುವ ರೀತಿ ಮಾತ್ರ ಸರಿ ಇರಬೇಕು. ಪ್ರೀತಿಯಿಂದ ಹೇಳಿದವರಿಗೆ ಎಲ್ಲರಿಗೂ ತಲೆಬಾಗುತ್ತೇನೆ. ನಮ್ಮ ವಿಡಿಯೋದಿಂದ ಯಾರಿಗಾದರೂ ನೋವಾಗಿದ್ದಲ್ಲಿ ಖಂಡಿತಾ ಕ್ಷಮೆ ಇರಲಿ.
Comments are closed.