Peacock Feather: ಮಾಜಿ ಸಚಿವ ಶಿವನಗೌಡ ನಾಯಕ್ ಹುಟ್ಟು ಹಬ್ಬ ಆಚರಣೆ – ನವಿಲುಗರಿ ಹಾರ ಹಾಕಿದ್ದ ಅಭಿಮಾನಿಗಳು – ದೂರು ದಾಖಲು

Share the Article

Peacock Feather: ಜೂನ್ 14ರಂದು ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕವೀತಾಳದಲ್ಲಿ ಮಾಜಿ ಸಚಿವ ಶಿವನಗೌಡ ನಾಯಕ್ ಅಭಿಮಾನಿಗಳೊಂದಿಗೆ ಭರ್ಜರಿಯಾಗಿ ಬರ್ತ್ ಡೇ ಆಚರಿಸಿಕೊಂಡಿದ್ದರು. ಹುಟ್ಟು ಹಬ್ಬ ಆಚರಣೆ ವೇಳೆ ನವಿಲುಗರಿಯಿಂದ ಮಾಡಿದ ಹಾರ ಧರಿಸಿದ್ದ ಫೋಟೋ ಇದೀಗ ವೈರಲ್‌ ಆಗಿದ್ದು, ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಇಲಾಖೆಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ದೂರು ನೀಡಿದ್ದಾರೆ.

ನವಿಲು ಗರಿಯಿಂದ ತಯಾರಿಸಿದ ಹಾರವನ್ನು ಸಾರ್ವಜನಿಕವಾಗಿ ಧರಿಸಿದ್ದ ಶಿವನಾಗೌಡ ನಾಯಕ್, ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಉಲ್ಲಂಘನೆಯಾಗಿದೆ ಎಂದು ದೂರು ದಾಖಲಿಸಲಾಗಿದೆ. ಶಿವನಗೌಡ ನಾಯಕ್ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದಿನೇಶ್ ಕಲ್ಲಳ್ಳಿ ದೂರಿನಲ್ಲಿ ಒತ್ತಾಯಿಸಿದ್ದಾರೆ. ನವಿಲು ಗರಿಯ ಮಾರಾಟಕ್ಕೆ ಕರ್ನಾಟಕದಲ್ಲಿ ಅನುಮತಿ ಇರುವುದಿಲ್ಲ. ನವಿಲು ಭಾರತದ ರಾಷ್ಟ್ರೀಯ ಪಕ್ಷಿಯಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972ರ ಅನೂಷ್ಠಾನ I (Schedule-I) ಅಡಿಯಲ್ಲಿದೆ.

ಕಾಯ್ದೆಯ ಪ್ರಕಾರ ನವಿಲು ಅಥವಾ ನವಿಲಿನ ಯಾವುದೇ ಅಂಗ (ಹಕ್ಕಿ, ಗರಿ, ಚರ್ಮ, ಇತ್ಯಾದಿ) ನೈಜವಾಗಿಯಾದರೂ ಅಥವಾ ಶಿಲ್ಪದ ರೂಪದಲ್ಲಾದರೂ ಸಂಗ್ರಹಿಸುವುದು, ಮಾರಾಟ ಮಾಡುವುದು, ಅಥವಾ ಸಾರ್ವಜನಿಕ ಪ್ರದರ್ಶನಕ್ಕೆ ಉಪಯೋಗಿಸುವುದು ಅಪರಾಧ. ನವಿಲು ಗರಿ ಹಾರವನ್ನು ಧರಿಸುವ ಮೂಲಕ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಶಿವನಗೌಡ ನಾಯಕ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ದಿನೇಶ್ ಕಲ್ಲಳ್ಳಿ ದೂರು ನೀಡಿದ್ದಾರೆ.

ಇದನ್ನೂ ಓದಿ: KSRTC: ಸಿಡಿದೆದ್ದ ಸಾರಿಗೆ ನೌಕರರು – ಆಗಸ್ಟ್ 5 ರಂದು ಸಾರಿಗೆ ಬಂದ್ – ನೌಕರರ ಬೇಡಿಕೆ ಏನು?

Comments are closed.