KMF: ರಾಜ್ಯದಲ್ಲಿ ಸತತ ಒಂದು ತಿಂಗಳಲ್ಲಿ ಏರಿದ ಹಾಲು ಉತ್ಪಾದನೆ – ಕೆಎಂಎಫ್ ಇತಿಹಾಸದಲ್ಲೇ ಅತಿ ಹೆಚ್ಚು ಹಾಲು ಸಂಗ್ರಹ

Share the Article

KMF: ಕರ್ನಾಟಕದಲ್ಲಿ ಸತತ 1 ತಿಂಗಳಿಂದ ಅತಿ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದು, ಕೆಎಂಎಫ್ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಹಾಲು ಸಂಗ್ರಹವಾಗಿದೆ. KMF ಸದ್ಯ ನಿತ್ಯ ಕೋಟಿ ಲೀಟರ್ ಹಾಲು ಸಂಗ್ರಹ ಮಾಡ್ತಿದೆ. ಮೇ ತಿಂಗಳಾಂತ್ಯದಿಂದ ದಿನನಿತ್ಯ ಕೋಟಿ ಲೀಟರ್ ದಾಟಿ ಹಾಲು ಉತ್ಪಾದನೆಯಾಗುತ್ತಿದೆ.

ಪ್ರಸ್ತುತ್ತ ರಾಜ್ಯದಲ್ಲಿ ನಿತ್ಯ 1 ಕೋಟಿ 5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಕಳೆದ ವರ್ಷ ಜೂನ್ -ಜುಲೈ ತಿಂಗಲ್ಲಿ 90 ಲಕ್ಷ ಹಾಲು ಉತ್ಪಾದನೆ ಇತ್ತು. ಒಂದು ತಿಂಗಳಿಂದ ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದೆ. ಹೀಗಾಗಿ ವಾತಾವರಣ ತಂಪಾದ ಕಾರಣ ಹಸಿರು ಮೇವು ಯಥೇಚ್ಚವಾಗಿ ಸಿಗುತ್ತಿರುವ ಹಿನ್ನೆಲೆ ಹಾಲು ಸಂಗ್ರಹದಲ್ಲಿ ಹೆಚ್ಚಳವಾಘಿದೆ. ನಿತ್ಯ ಸಂಗ್ರಹವಾದ ಒಂದು ಕೋಟಿ ಹಾಲಿನಲ್ಲಿ 80 ಲಕ್ಷ ಲೀಟರ್ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ.

ಇನ್ನು ಸಂಗ್ರಹವಾದ ಹೆಚ್ಚುವರಿ ಹಾಲಿನಿಂದ ಹಾಲಿನ ಪುಡಿ, ಮೊಸರು ವಿವಿಧ ಮೌಲ್ಯವರ್ಧಿತ ಉತ್ಪನ್ನ ತಯಾರಿಕೆ ಮಾಡಲಾಗುತ್ತಿದೆ. ಈ ಬಾರಿ ಮಳೆಗಾಲದಲ್ಲೇ 1,25 ಕೋಟಿ ಹಾಲು ಸಂಗ್ರಹ ಗುರಿ ಹೊಂದಲಾಗಿದೆ. ಆದರೆ ಸದ್ಯ ಒಂದು ತಿಂಗಳಿಂದ ನಿರಂತರವಾಗಿ 1ಕೋಟಿ 5 ಲಕ್ಷ ಹಾಲು ಸಂಗ್ರಹವಾಗ್ತಿರೋದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಇದನ್ನೂ ಓದಿ: Smart Meter: ಸರ್ಕಾರದಿಂದ ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಭ್ರಷ್ಟಾಚಾರ – ಖಾಸಗಿ ದೂರು ದಾಖಲು – ವಿಚಾರಣೆ ನಾಳೆಗೆ ಮುಂದೂಡಿಕೆ

Comments are closed.