Smart Meter: ಸರ್ಕಾರದಿಂದ ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಭ್ರಷ್ಟಾಚಾರ – ಖಾಸಗಿ ದೂರು ದಾಖಲು – ವಿಚಾರಣೆ ನಾಳೆಗೆ ಮುಂದೂಡಿಕೆ

Share the Article

Smart Meter: ಸರ್ಕಾರದಿಂದ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಿದ್ದ ಇಂಧನ ಇಲಾಖೆ ಭಾರೀ ಪ್ರಮಾಣದಲ್ಲಿ ಲೂಟಿ ಮಾಡಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ವಿರುದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ಇಂಧನ ಸಚಿವ ಕೆ.ಜೆ.ಚಾರ್ಜ್ ಮತ್ತು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಮೂವರು ಬಿಜೆಪಿ ಶಾಸಕರಿಂದ ಖಾಸಗಿ ದೂರು ಸಲ್ಲಿಸಲಾಗಿದೆ.

ಶಾಸಕರಾದ ಸಿ.ಎಸ್.ಅಶ್ವತ್ ನಾರಾಯಣ್, ಎಸ್.ಆರ್.ವಿಶ್ವನಾಥ್ ಮತ್ತು ದೀರಜ್ ಮುನಿರಾಜ್ ಅವರಿಂದ ಸಚಿವ ಕೆ.ಜೆ.ಚಾರ್ಜ್ ಮತ್ತು ಬೆಸ್ಕಾಂ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಸ್ಮಾರ್ಟ್ ಮೀಟರ್ ಅಳವಡಿಕೆ ಆದೇಶದಲ್ಲಿ ಅಕ್ರಮದ ಆರೋಪ ಸಂಬಂಧಿಸಿದಂತೆ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಸೂಚಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಾಗೂ ಬಿಎನ್ಎಸ್ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿ ತನಿಖೆಗೆ ಆದೇಶಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ದೂರು ಸಲ್ಲಿಕೆಯಾದ ಕೆಲವೇ ಕ್ಷಣಗಳಲ್ಲಿ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿತ್ತು. ಅರ್ಜಿದಾರರ ಪರ ವಕೀಲೆ‌ ಲಕ್ಷ್ಮೀ ಐಯ್ಯಂಗಾರ್ ವಾದ ಮಾಡಿದ್ದು, ರಾಜ್ ಶ್ರೀ ಕಂಪನಿಗೆ ಸ್ಮಾರ್ಟ್ ಮೀಟರ್ ನೀಡಲಾಗಿದೆ. ಇಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿರುವ ಅನುಮಾನ ಇದೆ. ಈ ಅಕ್ರಮದಲ್ಲಿ ಇಂಧನ ಸಚಿವರು, ಅಧಿಕಾರಿಗಳು ಭಾಗಿಯಾಗಿ ಆಗಿದ್ದಾರೆ ಎಂದು ಕೋರ್ಟ್‌ಗೆ ಹೇಳಿದರು. ಟೆಂಡರ್ ನಲ್ಲಿ ಕೇವಲ ಮೂರು ಕಂಪನಿ ಮಾತ್ರ ಟೆಂಡರ್‌ನಲ್ಲಿದ್ದವು. ಇತರೆ ಕಂಪನಿಗಳು ಟೆಂಡರ್ ಗೆ ಬರದಂತೆ ಷರತ್ತು ವಿಧಿಸಲಾಗಿತ್ತು. ಬಿಡ್‌ನಲ್ಲಿ ಇದ್ದ ಎರಡು ಕಂಪನಿಗಳು ಡಮ್ಮಿ ಕಂಪನಿಗಳು. ಹೀಗಾಗಿ ರಾಜಶ್ರೀಗೆ ಟೆಂಡರ್ ನೀಡಿರುವುದೇ ಅಕ್ರಮವಾಗಿ ಎಂದು ವಾದ ಮಂಡಿಸಿದರು.

ಬೆಸ್ಕಾಂ ನಲ್ಲಿ ದೊಡ್ಡ ಮಟ್ಟದ ಅಕ್ರಮಗಳು ನಡೆಯುತ್ತಿವೆ. ಒಂದು ಸ್ಮಾರ್ಟ್ ಮೀಟರ್ ಗೆ 5000 ರೂಪಾಯಿ. ತ್ರೀಫೇಸ್ ಮೀಟರ್ ಗಾಗಿ 9000 ಸಾವಿರ ನಿಗದಿ ಮಾಡಿದೆ. ಇದೇ ಮೀಟರ್ ಗಳು ಬೇರೆ ರಾಜ್ಯಗಳಲ್ಲಿ 900 ಮತ್ತು 500 ರೂ ಇದೆ

ಆದ್ರೆ ಕರ್ನಾಟಕದಲ್ಲಿ 10000 ರೂ. ಪಾವತಿ ಮಾಡಬೇಕಿದೆ. 18000 ಸ್ಮಾರ್ಟ್ ಮೀಟರ್ ಗಳನ್ನ ಜಾರಿ ಮಾಡಲಾಗಿದೆ ಎಂದು ಬೆಸ್ಕಾಂ ಹೇಳ್ತಾ ಇದೆ. ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ಇರಬೇಕು. ಆದ್ರೆ ಕೇಂದ್ರ ಸರ್ಕಾರದ ನಿಯಮ ಉಲ್ಲಂಘಿಸಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಎಂದು ವಕೀಲರು ಕೋರ್ಟ್‌ಗೆ ಹೇಳಿದರು.

ಎಲ್ಲಾ ಎಸ್ಕಾಂಗಳಲ್ಲೂ 10 ವರ್ಷಕ್ಕೆ ರಾಜಶ್ರೀಗೆ ಟೆಂಡರ್‌ ನೀಡುವಂತೆ ಇಲಾಖೆ‌ ಹೇಳಿದೆ. ಇಲ್ಲಿ ದೊಡ್ಡ ಮೊಟ್ಟದ ಅವ್ಯವಹಾರ ನಡೆದಿದೆ. ಸಚಿವರ ವಿರುದ್ಧ ಕ್ರಮಕ್ಕೆ ಪ್ರಾಸಿಕ್ಯೂಷನ್ ಗೆ ಅನುನತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಕ್ರಮಕೈಗೊಳ್ಳುವಂತೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಆದ್ರೆ ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ. ಇಂಧನ ಇಲಾಖೆಯಲ್ಲಿ ನಿರಂತವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಹೀಗಾಗಿ ಈ ಪ್ರಕರಣದ ತನಿಖೆಗೆ ಆದೇಶ ನೀಡುವಂತೆ ದೂರುದಾರರ ಪರ ವಕೀಲೆ ಲಕ್ಷ್ಮೀ ಅಯ್ಯಾಂಗರ್ ಮನವಿ ಮಾಡಿದರು.

ವಿಚಾರಣೆ ವೇಳೆ ದೂರುದಾರರಾರ ಶಾಸಕ ಅಶ್ವಥ್ ನಾರಾಯಣ್, ಎಸ್.ಆರ್.ವಿಶ್ವನಾಥ್, ಧೀರಜ್ ಮುನಿರಾಜು ಕೋರ್ಟ್ ನಲ್ಲಿ ಹಾಜರಿದ್ದರು. ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಲಾಗಿದೆ.

ಇದನ್ನೂ ಓದಿ: LA olympics : 2028ರ ಒಲಿಂಪಿಕ್ಸ್ ಗೆ ಕ್ರಿಕೆಟ್ ಸೇರ್ಪಡೆ -ವೇಳಾಪಟ್ಟಿ ಪ್ರಕಟ !!

Comments are closed.