Investment: ದೇವನಹಳ್ಳಿ ಭೂಸ್ವಾಧೀನ ಕೈಬಿಟ್ಟ ಸರ್ಕಾರ – ಬಂಡವಾಳ ಹೂಡಿಕೆ ವಲಯದಲ್ಲಿ ಭಾರೀ ಹಿನ್ನಡೆ

Investment: ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ಕೈಗಾರಿಕಾ ಪಾರ್ಕ್ ಅಧಿಸೂಚನೆ ರದ್ದು ಹಿನ್ನೆಲೆ ಬಂಡವಾಳ ಹೂಡಿಕೆ ವಲಯದಲ್ಲಿ ಭಾರೀ ಹಿನ್ನಡೆ ಉಂಟಾಗಲಿದೆ. ಇದೀಗ ರಾಜ್ಯದ ಏರೋಸ್ಪೇಸ್ ಇಂಜಿನಿಯರಿಂಗ್ ಉದ್ಯಮ ಆಂಧ್ರಪ್ರದೇಶದ ಪಾಲಾಗಿದೆ. ಬರೋಬ್ಬರಿ 17 ಏರೋಸ್ಪೇಸ್ ಉದ್ಯಮ ಆಂಧ್ರಪ್ರದೇಶದ ಕಡೆಗೆ ವಲಸೆ ಹೋಗಿದೆ.

ಬಂಡವಾಳ ಹೂಡಿಕೆ ಸಮಾವೇಶ ಮತ್ತು ದಾವೋಸ್ ಸಮಾವೇಶದಲ್ಲಿ ರಾಜ್ಯದ ಕಡೆ ಏರೋಸ್ಪೇಸ್ ಇಂಜಿನಿಯರಿಂಗ್ ಉದ್ಯಮಿಗಳು ಒಲವು ವ್ಯಕ್ತಪಡಿಸಿದ್ದರು. ಹಾಗಾಗಿ ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಭೂಮಿ ಕೊಡುವ ಭರವಸೆಯನ್ನು ರಾಜ್ಯ ಸರ್ಕಾರ ನೀಡಿತ್ತು. ಆದರೆ ಭೂಮಿ ಕೊಡಲು ಒಪ್ಪದೆ ರೈತರು ಹೋರಾಟ ನಡೆಸಿದ ಹಿನ್ನೆಲೆಯಲ್ಲಿ 1777 ಎಕರೆ ಭೂಮಿ ನೀಡುವ ಅಧಿಸೂಚನೆ ರದ್ದು ಮಾಡಲಾಯ್ತು.
ರಾಜ್ಯ ಸರ್ಕಾರ ಈ ತೀರ್ಮಾನ ತೆಗೆದುಕೊಂಡ ಬೆನ್ನಲ್ಲೇ ಎಲ್ಲಾ ಉದ್ಯಮಿಗಳನ್ನು ಸೆಳೆಯಲು ಆಂದ್ರಪ್ರದೇಶದ ಪ್ರಯತ್ನ ಮಾಡುತ್ತಿದೆ. ಉದ್ಯಮಿಗಳನ್ನು ಉಳಿಸಿಕೊಳ್ಳಲು ರಾಜ್ಯ ಕೈಗಾರಿಕಾ ಇಲಾಖೆ ಶತ ಪ್ರಯತ್ನ ನಡೆಸುತ್ತಿದೆ. ಹೀಗಾಗಿ ಭೂಮಿ ಕೊಡಲು ಮುಂದಾಗುವ ರೈತರೊಂದಿಗೆ ಶೀಘ್ರದಲ್ಲೇ ಸಭೆ ನಡೆಸಲು ತೀರ್ಮಾನಿಸಿದೆ. ಜಮೀನು ನೀಡುವ ರೈತರಿಗೆ ಹೆಚ್ಚಿನ ಪರಿಹಾರ ಧನ ನೀಡುವುದು ಮತ್ತು ಅಭಿವೃದ್ಧಿ ಪಡಿಸಿದ ಸೈಟ್ ನೀಡಲು ಕ್ರಿಯಾಯೋಜನೆಯನ್ನು ರಾಜ್ಯ ಸರ್ಕಾರ ಮಾಡಲು ತೀರ್ಮಾನಿಸಿದೆ.
ಗರಿಷ್ಠ ಪ್ರಮಾಣದ ಬಂಡವಾಳ ಹೂಡಿಕೆಯಾಗಲು ಸರ್ಕಾರ ಶತಪ್ರಯತ್ನ ಮಾಡುತ್ತಿದ್ದು, ಏರೋಸ್ಪೇಸ್ ಇಂಜಿನಿಯರಿಂಗ್ ಉದ್ಯಮ ವಲಸೆ ಹೋಗದಂತೆ ತಡೆಯಲು ಪ್ಲಾನ್ ಮಾಡುತ್ತಿದೆ. ಈ ಕುರಿತು ದೇಶ ವಿದೇಶಗಳಲ್ಲಿ ರೋಡ್ ಷೋ ಮಾಡಲು ತಿರ್ಮಾನ ಕೈಗೊಂಡಿದೆ ರಾಜ್ಯ ಸರ್ಕಾರ.
Comments are closed.