U-shaped Seating: ರಾಜ್ಯದ ಶಾಲೆಗಳಲ್ಲಿನ್ನು ‘ಲಾಸ್ಟ್ ಬೆಂಚ್, ಫಸ್ಟ್ ಬೆಂಚ್’ ವಿಧಾನಕ್ಕೆ ಬ್ರೇಕ್ – ‘U ಶೇಪ್’ ಆಸನ ವ್ಯವಸ್ಥೆಗೆ ಒತ್ತಾಯ!!

Share the Article

U-shaped Seating: ರಾಜ್ಯದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಬೆಂಚ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲು ಮಕ್ಕಳ ಹಕ್ಕುಗಳ ಹೋರಾಟಗಾರರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಹೌದು, ಇನ್ಮುಂದೆ ಶಾಲೆಗಳಲ್ಲಿ ಲಾಸ್ಟ್ ಬೆಂಚ್, ಫಸ್ಟ್ ಬೆಂಚ್ ವಿದ್ಯಾರ್ಥಿಗಳು ಎಂಬ ವಿಧಾನಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಸಿನಿಮಾ ಒಂದರ ಪ್ರೇರಣೆ ಪಡೆದು ಈಗಾಗಲೇ ಕೇರಳದಲ್ಲಿನ ಶಾಲೆಗಳಲ್ಲಿ ಅರ್ಧವೃತ್ತಾಕಾರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು (U-shaped seating arrangement) ಜಾರಿಗೆ ತರಲಾಗಿದೆ. ಕೇರಳದ ಶಾಲೆಗಳಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾದ ಅರ್ಧವೃತ್ತಾಕಾರದ (U-shaped) ಆಸನ ವ್ಯವಸ್ಥೆಯನ್ನು ಕರ್ನಾಟಕದ ಶಾಲೆಗಳಲ್ಲಿಯೂ ಅಳವಡಿಸಿಕೊಳ್ಳುವಂತೆ ಮಕ್ಕಳ ಹಕ್ಕುಗಳ ಹೋರಾಟಗಾರರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಅರ್ಧ ವೃತ್ತಾಕಾರ ಅಥವಾ ‘U’ ಆಕಾರದಲ್ಲಿ ವಿದ್ಯಾರ್ಥಿಗಳನ್ನು ಕೂರಿಸುವ ವಿಧಾನ ಫಸ್ಟ್‌ ಬೆಂಚ್‌, ಲಾಸ್ಟ್‌ ಬೆಂಚ್‌ ಎಂಬಂತೆ ಕ್ರಮದಲ್ಲಿ ಇಡುವ ವಿಧಾನಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ. ಮಾತ್ರವಲ್ಲದೇ ಈ ವಿಧಾನದಿಂದ ಶಿಕ್ಷಕರು ಕೂಡಾ ಎಲ್ಲಾ ವಿದ್ಯಾರ್ಥಿಗಳ ಮೇಲೂ ಗಮನ ಇಡಲು, ಸಂವಾದವನ್ನು ಸುಧಾರಿಸಲು ಮಹತ್ವದ ಪಾತ್ರವಹಿಸುತ್ತಿದೆ. ಇದು ಮಕ್ಕಳಲ್ಲಿ ಸಮಾನತೆಯ ಭಾವನೆಯನ್ನೂ ಮೂಡಿಸುತ್ತದೆ, ಶಿಕ್ಷಕರು ಎಲ್ಲಾ ಮಕ್ಕಳನ್ನು ಒಂದೇ ದೃಷ್ಟಿಯಲ್ಲಿ ಕಾಣುತ್ತಾರೆ. ಎಲ್ಲಾ ಮಕ್ಕಳಿಗೂ ಸಮಾನವಾಗಿ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ನೀಡುತ್ತದೆ. ಈ ವಿಧಾನದ ಅಳವಡಿಕೆಯಿಂದ ಕೇರಳದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎನ್ನಲಾಗಿದೆ.

ಒಂದು ವೇಳೆ ಈ ಮನವಿಗೆ ಸಚಿವರು ಸ್ಪಂದಿಸಿ ಒಕೆ ಹೇಳಿದರೆ ಇನ್ಮುಂದೆ ನಮ್ಮ ರಾಜ್ಯದಲ್ಲಿಯೂ ಯು ಸಿಟಿಂಗ್‌ ಅರೇಂಜ್‌ಮೆಂಟ್‌ ಜಾರಿಗೆ ಬರಲಿದೆ.

ಇದನ್ನೂ ಓದಿ: High Court: ಮುಜರಾಯಿ ಸುಪರ್ದಿಗೆ ಗಾಳಿ ಆಂಜನೇಯ ದೇಗುಲ ಕೇಸ್‌: ಕೋರ್ಟ್‌ ಹೇಳಿದ್ದೇನು?

Comments are closed.