Multiplex: ರಾಜ್ಯ ಸರ್ಕಾರದಿಂದ ಮಲ್ಟಿಪ್ಲೆಕ್ಸ್‌ಗೆ ಮೂಗುದಾರ- ಫಿಕ್ಸ್ ಆಯ್ತು 200 ಟಿಕೆಟ್ ದರ!!

Share the Article

Multiplex: ರಾಜ್ಯದ ಮಲ್ಟಿಪ್ಲೆಕ್ಸ್ ಗಳಿಗೆ ರಾಜ್ಯ ಸರ್ಕಾರವು ಮೂಗುದಾರ ಹಾಕಿದ್ದು ಟಿಕೆಟ್ ದರವನ್ನು ನಿಗದಿ ಮಾಡಿ ಆದೇಶವನ್ನು ಹೊರಡಿಸಿದೆ. ಆ ಮೂಲಕ ರಾಜ್ಯಾದ್ಯಂತ ಒಂದೇ ದರ ನಿಗದಿ ಮಾಡಲಾಗಿದೆ.

ಹೌದು, ರಾಜ್ಯದಲ್ಲಿ ದುಬಾರಿಯಾಗಿದ್ದ ಸಿನಿಮಾ ಟಿಕೆಟ್ ಬೆಲೆಗೆ ರಾಜ್ಯ ಸರ್ಕಾರ ಕಡಿವಾಣ ಹಾಕಿದೆ. ಇನ್ಮುಂದೆ ಟಿಕೆಟ್ ಬೆಲೆ 200 ರೂಪಾಯಿ ಮೀರಬಾರದು ಎಂದು ಆದೇಶ ಹೊರಡಿಸಲಾಗಿದೆ. ಕನ್ನಡ ಸಿನಿಮಾಗಳು ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾಗಳಿಗೂ ಈ ನಿಯಮ ಅನ್ವಯ ಆಗಲಿದೆ. ಈ ಮೂಲಕ ತಮಿಳುನಾಡು ಹಾಗೂ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಏಕರೂಪ ಟಿಕೆಟ್ ದರ ನೀತಿ ಜಾರಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಹೀಗಾಗಿ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಇನ್ಮೇಲೆ 200 ರೂಪಾಯಿ ಟೆಕೆಟ್ ದರ ಮೀರುವಂತಿಲ್ಲ.

ಇತ್ತೀಚೆಗೆ ನಡೆದ ಸ್ಟೇಟ್ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಏಕರೂಪ ಟಿಕೆಟ್ ದರ ನೀತಿಯನ್ನ ನೆರೆ ರಾಜ್ಯಗಳಂತೆ ಇಲ್ಲಿಯೂ ಜಾರಿಗೊಳಿಸಲಾಗುವುದು ಅಂತ ಹೇಳಿದ್ದರು. ಇದೀಗ ನುಡಿದಂತೆ ನಡೆದಿದ್ದಾರೆ ಸಿಎಂ ಸಿದ್ದರಾಮಯ್ಯ. ಕ್ಯಾಬಿನೆಟ್‌‌ನಲ್ಲಿ ಒಮ್ಮತದ ನಿರ್ಧಾರದೊಂದಿಗೆ ಸರ್ಕಾರ ಅಧಿಕೃತ ಆದೇಶ ಮಾಡಿ ಆಗಿದೆ. ಇದು ಮುಂದಿನ 15 ದಿನದಲ್ಲಿ ರಾಜ್ಯಪತ್ರದಲ್ಲಿ ಪ್ರಕಟಣೆ ಆಗಬೇಕಿದೆ. ಸಿಎಂ ಮುಖ್ಯ ಕಾರ್ಯದರ್ಶಿ ಸಹಿ ಹಾಕಿ, ಅದನ್ನ ರಾಜ್ಯಪಾಲರ ಅನುಮೋದನೆಗೆ ಕಳುಹಿಸುತ್ತಾರೆ. ಅಲ್ಲಿ ರಾಜ್ಯಪಾಲರ ಒಪ್ಪಿಗೆ ಮೇರೆಗೆ ರಾಜ್ಯಪತ್ರ ಹೊರಡಿಸಲಾಗುತ್ತೆ. ಅಲ್ಲಿಗೆ ಅದು ಅಧಿಕೃತ ಆಗಲಿದೆ.

ಸದ್ಯ ಚಿತ್ರಮಂದಿರಗಳು ಕಡಿಮೆಯಾಗುತ್ತಿದ್ದು, ಮಲ್ಟಿಫ್ಲೆಕ್ಸ್‌ಗಳು ಹೆಚ್ಚಾಗಿತ್ತಿವೆ. ಬಿಡುಗಡೆಯಾಗುವ ಬಹುತೇಕ ಸಿನಿಮಾಗಳು ಮಲ್ಟಿಫ್ಲೆಕ್ಸ್‌ಗಳಿಗೆ ಸೀಮಿತವಾಗಿವೆ. ಆದರೆ, ಮಲ್ಟಿಫ್ಲೆಕ್ಸ್‌ಗಳಲ್ಲಿ ಸಿಕ್ಕಾಪಟ್ಟೆ ಟಿಕೆಟ್‌ ದರ ನಿಗದಿ ಮಾಡುತ್ತಿದ್ದು, ಸಿನಿಮಾ ಪ್ರೇಕ್ಷಕರ ಜೇಬಿಗೆ ಕತ್ತರಿ ಬೀಳುತ್ತಿತ್ತು. ಸದ್ಯ ಸರ್ಕಾರ ಗರಿಷ್ಠ ಟಿಕೆಟ್‌ ದರ ನಿಗದಿ ಮಾಡಿದ್ದು, ಪ್ರೇಕ್ಷಕರಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ: Tamilnadu: ನೆಗಡಿ ಕೆಮ್ಮಿತ್ತು ಎಂದು 8 ತಿಂಗಳ ಮಗುವಿಗೆ ವಿಕ್ಸ್‌, ಕರ್ಪೂರ ಹಚ್ಚಿದ ಪೋಷಕರು: ಮಗು ಸಾವು

Comments are closed.