Dragon Fruit : ದಿಢೀರ್ ಕುಸಿದ ‘ಡ್ರ್ಯಾಗನ್ ಫ್ರೂಟ್’ ದರ – ಹಣ್ಣು ಬೆಳೆದ ರೈತರ ಕಂಗಾಲು

Dragon Fruit : ಕೆಲವೇ ವರ್ಷಗಳಲ್ಲಿ ಕೃಷಿ ವಲಯದಲ್ಲಿ ಕ್ರಾಂತಿ ಸೃಷ್ಟಿಸಿದ್ದ ಡ್ರ್ಯಾಗನ್ ಹಣ್ಣು ಇದೀಗ ಬೆಲೆ ಇಳಿಕೆ ಸಂಕಷ್ಟದಲ್ಲಿ ಸಿಲುಕಿ ನಲುಗುತ್ತಿದೆ. ಇದ್ರಿಂದ ಕಳೆದ ನಾಲ್ಕೈದು ವರ್ಷಗಳ ಹಿಂದೆ ಡ್ರ್ಯಾಗನ್ ಹಣ್ಣು ಬೆಳೆದು ಕೈ ತುಂಬಾ ಹಣ ಎಣಿಸುತ್ತಿದ್ದ ರೈತರು ಈಗ ಬೆಲೆ ಕುಸಿತದಿಂದ ಪರಿತಪಿಸುವಂತೆ ಆಗಿದೆ.

ಹೌದು, ಮಾರುಕಟ್ಟೆಯಲ್ಲಿ ಹಣ್ಣಿಗೆ ಉತ್ತಮ ಬೆಲೆ ಮತ್ತು ಬೇಡಿಕೆ ಇದ್ದರಿಂದ ರೈತರು ಲಕ್ಷ, ಲಕ್ಷ ಹಣ ಎಣಿಸಿದ್ದರು. ಡ್ರ್ಯಾಗನ್ ಪ್ರೂಟ್ಸ್ ಬೆಳೆದು ಆರ್ಥಿಕ ಸಂಕಷ್ಟದಿಂದ ಹೊರಬಂದು ಉತ್ತಮ ಆದಾಯ ಪಡೆಯಬಹುದು ಎಂಬ ಆಶಾಭಾವನೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಜನ ರೈತರು ಡ್ರ್ಯಾಗನ್ ಪ್ರೂಟ್ಸ್ ಬೆಳೆದು ಸಂಕಷ್ಟ ಎದುರಿಸುತ್ತಿದ್ದಾರೆ. ಹಿಂದೆ ಹಣ್ಣಿಗೆ ಉತ್ತಮ ಬೆಲೆ ಇತ್ತು 1 ಕೆಜಿ ಹಣ್ಣಿಗೆ ₹ 150ರಿಂದ ₹ 200 ಮಾರಾಟವಾಗುತ್ತಿತ್ತು. ಈಗ ₹ 100ಗೆ ಕೆಜಿ ಕೇಳುವವರೂ ಇಲ್ಲವಾಗಿದೆ.
ಈ ರೀತಿ ಬೆಲೆ ಸಂಕಷ್ಟದಲ್ಲಿ ಸುಲುಕಿದವರಲ್ಲಿ ಹಾವೇರಿ ರೈತ ನಿಂಗಪ್ಪ ಕೂಡ ಒಬ್ಬರು. ಅವರು ಚಿತ್ರದುರ್ಗದಿಂದ ₹ 25ಕ್ಕೆ ಒಂದರಂತೆ ತಮ್ಮ 1 ಎಕರೆ 20 ಗುಂಟೆ ಪ್ರದೇಶದಲ್ಲಿ 750 ಸಸಿ ಹಾಕಿದ್ದಾರೆ. ಸಸಿಗೆ ಒಂದರಂತೆ ಆಶ್ರಯವಾಗಿ 750 ಸಿಮೆಂಟ್ ಕಂಬವನ್ನು ಹಾಕಲಾಗಿದೆ. 3 ವರ್ಷದ ಹಿಂದೆ ಬೆಳೆ ಹಾಕಲಾಗಿದ್ದು, ₹ 7 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಬೆಳೆದಿದ್ದಾರೆ.
ಸಂಕಷ್ಟಕ್ಕೆ ಸಿಲುಕಿ ಮಾತನಾಡಿದ ಅವರು’ಬೆಳೆದ ಬೆಳೆ ಈಗ ಉತ್ತಮ ಇಳುವರಿ ಬರುತ್ತಿದ್ದು, ಹಣ್ಣಿಗೆ ಬೆಡಿಕೆ ಕಡಿಮೆಯಾಗಿದೆ. ಬೆಲೆ ಕುಸಿತದಿಂದ ಸಂಕಷ್ಟ ಎದುರಿಸಬೇಕಾಗಿದೆ. ಒಂದು ವರ್ಷದ ಹಿಂದೆ ಹಣ್ಣು ಕೆಜಿ ಒಂದಕ್ಕೆ ₹ 100 ರಿಂದ ₹150ಕ್ಕೆ ಮಾರಾಟ ಮಾಡಲಾಗಿದೆ. ಹಾವೇರಿ ಮತ್ತು ಮೋಟೆಬೆನ್ನೂರನ ದಲ್ಲಾಳಿಗಳು ಜಮೀನಿಗೆ ಬಂದು ಖರೀದಿ ಮಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ₹ 100ರ ಒಳಗೆ ಮಾರಾಟವಾಗುತ್ತಿವೆ’ ಎಂದು ರೈತ ನಿಂಗಪ್ಪ ವಿಷಾದದಿಂದ ಹೇಳಿದರು.
Comments are closed.