Heart Attack: ಚಹಾ ಕುಡಿಯುತ್ತಿರುವಾಗಲೇ ನಗರಸಭೆ ಮಾಜಿ ಅಧ್ಯಕ್ಷ ಹಾರ್ಟ್ ಅಟ್ಯಾಕ್ಗೆ ಸಾವು

Heart Attack: ಹೃದಯಾಘಾತದ ಸಾವಿನ ಸರಣಿ ಮುಂದುವರಿದಿದೆ. ನಗರಸಭೆ ಮಾಜಿ ಅಧ್ಯಕ್ಷರೊಬ್ಬರು ಚಹಾ ಕುಡಿಯುತ್ತಿರುವಾಗಲೇ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರಸಭೆ ಮಾಜಿ ಅಧ್ಯಕ್ಷ ಸಿದ್ದು ಮೀಸಿ ಮೃತ ದುರ್ದೈವಿ. ಇವರು ಎಂದಿನಂತೆ ಮನೆಯ ಹೊರಗೆ ಕುಳಿತು ಚಹಾ ಕುಡಿಯುತ್ತಿರುವಾಗಲೇ ಎದೆನೋವು ಬಂದು ಕುಸಿದು ಬಿದ್ದು, ಹಠಾತ್ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ಜಮಖಂಡಿ ಅಂಬೇಡ್ಕರ್ ಸರ್ಕಲ್ ಬಳಿಯ ನಿವಾಸದಲ್ಲಿ ಈ ಘಟನೆ ನಡೆದಿದೆ. ಸಿದು ಮೀಸಿ ಜಮಖಂಡಿ ತಾಲೂಕಿನ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿದ್ದರು ಎಂದು ವರದಿಯಾಗಿದೆ.
ಇದನ್ನೂ ಓದಿ: Madhya Pradesh: ಕೆಲಸ ಮಾಡುವ ರೀತಿ ಫೋಸ್ ಕೊಡೋಕೆ ಹೋಗಿ ಹೊಂಡಕ್ಕೆ ಬಿದ್ದ ಸಾಮಾಜಿಕ ಕಾರ್ಯಕರ್ತ
Comments are closed.