Home ದಕ್ಷಿಣ ಕನ್ನಡ Belthangady : ಗೇರುಕಟ್ಟೆಯ ಮನೆಯೊಂದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದಿಢೀರ್ ದಾಳಿ – ಒಂದು ತಿಂಗಳಲ್ಲಿ...

Belthangady : ಗೇರುಕಟ್ಟೆಯ ಮನೆಯೊಂದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದಿಢೀರ್ ದಾಳಿ – ಒಂದು ತಿಂಗಳಲ್ಲಿ 30 ಪ್ರಾಣಿಗಳ ಭೇಟೆ? ಕಾಡುಪ್ರಾಣಿ ಮಾಂಸ, ಕೋವಿ ವಶ !!

Hindu neighbor gifts plot of land

Hindu neighbour gifts land to Muslim journalist

Belthangady : ದಕ್ಷಿಣ ಕನ್ನಡ ಜಿಲ್ಲೆಯ ಮಡಂತ್ಯಾರ ಗ್ರಾಮದ ಗೇರುಕಟ್ಟೆ ನಿವಾಸಿ ಜೋಸ್ಸಿ ಅಲ್ವಿನ್‌ ಲೋಬೋ ಅವರ ಮನೆಗೆ ಜು. 12ರಂದು ತಡರಾತ್ರಿ ಬೆಳ್ತಂಗಡಿಯ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿದ್ದು ಯಾವುದೋ ಕಾಡು ಪ್ರಾಣಿಯ 17 ಕೆಜಿ ಮಾಂಸ ಮತ್ತು ಬೇಟೆಗೆ ಬಳಸಿದ ಕೋವಿ ಇತ್ಯಾದಿ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

 

ಹೌದು, ಕಾಡು ಪ್ರಾಣಿಯನ್ನು ಬೇಟೆಯಾಡಿ ಮಾಂಸ ಮಾಡಿ ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿಸಿ ಕಾರಿನಲ್ಲಿಟ್ಟು ಸಾಗಾಟ ಮಾಡಲು ಪ್ರಯತ್ನಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿ ಕುಲಾಯಿ ಮೇಗಿನ ಮನೆ ನಿವಾಸಿ ಶರತ್‌ ಶೆಟ್ಟಿಗೆ ಸೇರಿದ ರಕ್ತದ ಕಲೆಗಳಿದ್ದ ಬಿಳಿ ಬಣ್ಣದ ಕಾರು, ಒಂದು ಸಿಂಗಲ್‌ ಬ್ಯಾರಲ್‌ ಕೋವಿ, ಮೂರು ಕಾಟ್ರಿಜ್‌, ಒಂದು ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ.

 

ಯಾವ ಪ್ರಾಣಿಯ ಮಾಂಸ ಎಂದು ತಿಳಿಯಲು ಮಾಂಸವನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯಲ್ಲಿ ಆರೋಪಿಗಳಾದ ಜೋಸ್ಸಿ ಅಲ್ವಿನ್‌ ಲೋಬೋ ಮತ್ತು ಶರತ್‌ ಶೆಟ್ಟಿ ವಿರುದ್ಧ ವನ್ಯಜೀವಿ ಅಪರಾಧ ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

 

ಇನ್ನು ಈ ಕುಖ್ಯಾತ ಕಾಡುಪ್ರಾಣಿ ಬೇಟೆ ತಂಡದಲ್ಲಿ ಬೆಳ್ತಂಗಡಿ ತಾಲೂಕಿನ 20 ಮಂದಿಗೂ ಅಧಿಕ ಸದಸ್ಯರಿದ್ದು, ಅವ ರಲ್ಲಿ ಪರವಾನಿಗೆ ಇರುವ ಮತ್ತು ಅಕ್ರಮ ಕೋವಿ ಹೊಂದಿ ದವರು ಸದಸ್ಯರಾಗಿದ್ದಾರೆ. ಈ ಒಂದು ತಿಂಗಳಲ್ಲಿ 30 ಕಾಡುಪ್ರಾಣಿಗಳನ್ನು ಬೇಟೆಯಾಡಿದ್ದಾರೆ ಎಂದು ಈ ಬೇಟೆಗಾರರ ಸದಸ್ಯರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ

ಇದನ್ನೂ ಓದಿ: Maharashtra: ಚಲಿಸುತ್ತಿದ್ದ ಬಸ್‌ನಲ್ಲಿ ಮಗುವಿಗೆ ಜನನ: ಕಿಟಕಿಯಿಂದ ಹೊರಗೆಸೆದು ಹತ್ಯೆ