Udit Raj: ಶುಭಾಂಶು ಬದಲು ದಲಿತ ಗಗನಯಾತ್ರಿಯನ್ನು ಕಳಿಸಬೇಕಿತ್ತು – ಕಾಂಗ್ರೆಸ್ ನಾಯಕ ಹೇಳಿಕೆ

Udit Raj: ಆಕ್ಸಿಯಮ್-4 ಮಿಷನ್ ಯಶಸ್ವಿಯಾಗಿ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಬಂದಿಳಿದ್ದಾರೆ.ಈ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಒಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದು ಸುಭಾಂಷು ಶುಕ್ಲ ಬದಲು ದಲಿತ ಗಗನ ಯಾತ್ರಿಯನ್ನು ಕಳಿಸಬೇಕಿತ್ತು ಎಂದು ಹೇಳಿಕೆ ನೀಡಿದ್ದಾರೆ.

ಹೌದು, ವೇಳೆ ಕಾಂಗ್ರೆಸ್ ನಾಯಕ ಉದಿತ್ ರಾಜ್ ಶುಭಾಂಶು ಶುಕ್ಲಾ ಬದಲಿಗೆ ದಲಿತ ಗಗನಯಾನಿಯೊಬ್ಬನನ್ನ ಕಳಿಸಬೇಕಿತ್ತು ಎನ್ನುವ ಮೂಲಕ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ.
ರಾಕೇಶ್ ಶರ್ಮಾ ಅವರನ್ನ ಕಳಿಸಿದಾಗ ಎಸ್ಸಿ, ಎಸ್ಟಿ, ಒಬಿಸಿ ಜನರು ಅಷ್ಟೊಂದು ವಿದ್ಯಾವಂತರಾಗಿರಲಿಲ್ಲ. ಈ ಬಾರಿ ದಲಿತರನ್ನ ಕಳಿಸುವ ಸರದಿ ಬಂದಿದೆ ಎಂದು ನಾನು ಭಾವಿಸುತ್ತೇನೆ. ನಾಸಾ, ಪರೀಕ್ಷೆ ನಡೆಸಿ ಶುಭಾಂಶು ಶುಕ್ಲಾರನ್ನ ಆಯ್ಕೆ ಮಾಡಿಲ್ಲ, ಶುಕ್ಲಾ ಬದಲಿಗೆ ಯಾವುದೇ ದಲಿತ ಅಥವಾ ಒಬಿಸಿಯನ್ನ ಕಳುಹಿಸಬಹುದಿತ್ತು ಎಂದಿದ್ದಾರೆ.
Comments are closed.