Dakshina Kannada: ಕಾಲೇಜು ಉಪನ್ಯಾಸಕರಿಂದಲೇ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್‌: ಬೆಂಗಳೂರಿನಲ್ಲಿ ಮೂವರು ಅರೆಸ್ಟ್‌

Share the Article

Dakshina Kannada: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕಾಲೇಜೊಂದರ ಇಬ್ಬರು ಉಪನ್ಯಾಸಕರು ಹಾಗೂ ಅವರ ಸ್ನೇಹಿತನೊಬ್ಬ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ ಮಾಡಿದ ಆರೋಪದ ಹಿನ್ನೆಲೆ ಬೆಂಗಳೂರಿನ ಮಾರತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಮೂವರು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಬಂಧಿತರನ್ನು ಫಿಸಿಕ್ಸ್‌ ಉಪನ್ಯಾಸಕ ನರೇಂದ್ರ, ಬಯೋಲಜಿ ಲೆಕ್ಚರ್‌ ಸಂದೀಪ್‌ ಹಾಗೂ ಅವರ ಗೆಳೆಯ ಅನೂಪ್‌ ಎಂದು ಗುರುತಿಸಲಾಗಿದೆ.

ಫಿಸಿಕ್ಸ್‌ ಉಪನ್ಯಾಸಕ ನರೇಂದ್ರ ನೋಟ್ಸ್‌ ನೀಡುವ ನೆಪದಲ್ಲಿ ವಿದ್ಯಾರ್ಥಿನಿ ಜೊತೆ ಹತ್ತಿರವಾಗಿದ್ದು, ನಂತರ ಚಾಟ್‌, ನೋಟ್ಸ್‌ ನೀಡುವುದು ಹೀಗೆ ಮುಂದುವರಿದಿತ್ತು. ವಿದ್ಯಾರ್ಥಿನಿ ಜೊತೆ ಸಲುಗೆ ಬೆಳೆಸಿದ್ದ ಉಪನ್ಯಾಸಕ, ಆಕೆ ಬೆಂಗಳೂರಿಗೆ ಬಂದ ನಂತರವೂ ಚಾಟ್‌ ಮಾಡುವುದು ಮುಂದುವರಿಸಿದ್ದ. ನೋಟ್ಸ್‌ ನೀಡುವುದನ್ನು ಕೂಡಾ ನಿಲ್ಲಿಸಿರಲಿಲಲ್.‌ ಇದೇ ನೆಪ ಮಾಡಿಕೊಂಡು ಮಾರತಹಳ್ಳಿಯ ಗೆಳೆಯನ ರೂಮ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಅಲ್ಲದೇ ಯಾರಿಗೂ ಈ ವಿಷಯ ತಿಳಿಸಬಾರದೆಂದು ಬೆದರಿಕೆ ಹಾಕಿದ್ದ.

ಉಪನ್ಯಾಸಕ ನರೇಂದ್ರ ಈ ಕೃತ್ಯ ಮಾಡಿದ ನಂತರ ಬಯಾಲಜಿ ಉಪನ್ಯಾಸಕ ಸಂದೀಪ್‌ ಕೂಡ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದ. ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದ್ದಳು. ಆಗ ಆತ, ನರೇಂದ್ರನ ಜೊತೆ ಇರುವ ಫೋಟೋ, ವಿಡಿಯೋ ನನ್ನ ಬಳಿ ಇದೆ. ಕಾಲೇಜಿನಲ್ಲಿ ಎಲ್ಲರಿಗೂ ಗುತ್ತಾಗುವಂತೆ ಮಾಡುವೆ ಎಂದು ಬ್ಲ್ಯಾಕ್‌ಮೇಲ್‌ ಮಾಡಿದ್ದು, ಅತ್ಯಾಚಾರ ಮಾಡಿದ್ದ.

ಇವರಿಬ್ಬರು ಆದ ನಂತರ ಸಂದೀಪ್‌ ರೂಮ್‌ಮೇಟ್‌ ಅನೂಪ್‌ ಬಂದಿದ್ದ. ಈತ ವಿದ್ಯಾರ್ಥಿನಿಯನ್ನು ಸಂಪರ್ಕಿಸಿ, ನೀನು ನನ್ನ ರೂಮ್‌ಗೆ ಬಂದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ನನ್ನ ರೂಮ್‌ನಲ್ಲಿ ಸಿಸಿಟಿವಿ ಇದೆ ಎಂದು ಬೆದರಿಕೆ ಹಾಕಿ ಆತ ಕೂಡಾ ಯುವತಿ ಮೇಲೆ ಅತ್ಯಾಚಾರ ಮಾಡಿದ್ದ ಎಂದು ವರದಿಯಾಗಿದೆ.

ಇದೆಲ್ಲವನ್ನೂ ಸಹಿಸಿ ಮೊದಲಿಗೆ ಸುಮ್ಮನಿದ್ದ ವಿದ್ಯಾರ್ಥಿನಿ ನಂತರ ಸಮಸ್ಯೆ ಹೆಚ್ಚಿದಾಗ ಪೋಷಕರಲ್ಲಿ ಹೇಳಿದ್ದಾಳೆ. ನಂತರ ಪೋಷಕರು ಆಕೆಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿದ್ದು, ಆಕೆಗೆ ಕೌನ್ಸಲಿಂಗ್‌ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇದೀಗ ಮಾರತಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮಾಡುತ್ತಿದ್ದಾರೆ.

ಇದನ್ನೂ ಓದಿ: Kodi Shri: ‘ಅರಸನ ಮನೆಗೆ ಕಾರ್ಮೋಡ ಕವಿದೀತು ಹುಷಾರ್’ – ಮೈಸೂರಲ್ಲಿ ಕೋಡಿ ಶ್ರೀ ಭವಿಷ್ಯ

Comments are closed.