Home News Kodi Shri: ‘ಅರಸನ ಮನೆಗೆ ಕಾರ್ಮೋಡ ಕವಿದೀತು ಹುಷಾರ್’ – ಮೈಸೂರಲ್ಲಿ ಕೋಡಿ ಶ್ರೀ ಭವಿಷ್ಯ

Kodi Shri: ‘ಅರಸನ ಮನೆಗೆ ಕಾರ್ಮೋಡ ಕವಿದೀತು ಹುಷಾರ್’ – ಮೈಸೂರಲ್ಲಿ ಕೋಡಿ ಶ್ರೀ ಭವಿಷ್ಯ

Hindu neighbor gifts plot of land

Hindu neighbour gifts land to Muslim journalist

Kodi Shri: ರಾಜಕೀಯ ವಿಚಾರ, ನೈಸರ್ಗಿಕ ವಿಚಾರ ಹಾಗೂ ಸಾವು ನೋವು, ಮಳೆ ಮತ್ತು ಪ್ರಕೃತಿ ವಿಕೋಪಗಳ ಆದಿಯಾಗಿ ಅನೇಕ ಸಂಗತಿಗಳ ಕುರಿತು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿಯುತ್ತಾರೆ. ಅವರ ಎಲ್ಲ ಭವಿಷ್ಯಗಳು ಕೂಡ ನಿಜವಾಗಿವೆ. ಅದರಲ್ಲೂ ರಾಜಕೀಯವಾಗಿ ಅವರು ನೀಡುವ ಅಚ್ಚರಿ ಭವಿಷ್ಯಗಳು ಸತ್ಯವಾಗಿದೆ. ಇದೀಗ ಶ್ರೀಗಳು ಭವಿಷ್ಯದ ಕೆಲವು ವಿಚಾರಗಳ ಕುರಿತು ಮಾಹಿತಿ ನೀಡಿದ್ದಾರೆ.

ಹೌದು, ಮೈಸೂರಿನ ನಮನ್ ಫೌಂಡೇಶನ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಹೊಸ ಧ್ಯಾನ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರಗಳಲ್ಲಿ ಅಧಿಕಾರದಲ್ಲಿರುವವರಿಗೆ ಮುಂದಿನ ದಿನಗಳಲ್ಲಿ ಕೆಲವು ತೊಂದರೆಗಳು ಎದುರಾಗಬಹುದು ಎಂದು ಶ್ರೀಗಳು ತಿಳಿಸಿದ್ದಾರೆ. ಈ ಕುರಿತಾಗಿ ಅರಸನ ಮನೆಗೆ ಕಾರ್ಮೋಡ ಕವಿದೀತು ಹುಷಾರ್ ಎಂದಿದ್ದಾರೆ.

ಅಲ್ಲದೆ ಯುದ್ಧಗಳು ಮುಂದುವರೆಯುತ್ತವೆ. ಯುದ್ಧಗಳು ನಿಲ್ಲುವುದು ಮನಸ್ಸುಗಳು ನಿಂತಾಗ ಮಾತ್ರ. ಒಂದಾದ ದಿನ ವಿಶ್ವವೇ ತಿರುಗಿ ನೋಡುವಂತಹ ಆಘಾತ ಭಾರತಕ್ಕೆ ಕಾದಿದೆ. ಅದಷ್ಟೇ ಅಲ್ಲದೆ, ಮಾನವನ ಜೀವನ, ಪ್ರಕೃತಿ, ಮತ್ತು ಆಧ್ಯಾತ್ಮದ ಕುರಿತು ಶ್ರೀಗಳು ತಮ್ಮ ವಿಶಿಷ್ಟ ಅಭಿಪ್ರಾಯಗಳನ್ನು ಹಂಚಿಕೊಂಡರು.

ಮನುಷ್ಯ ಮೌನವಾಗಿದ್ದರೆ ಹೆಚ್ಚು ಜ್ಞಾನವನ್ನು ಸಂಪಾದಿಸಬಹುದು. ಪ್ರಕೃತಿ ಮತ್ತು ವೃಕ್ಷಗಳಿಗೆ ಅಪಾರ ಶಕ್ತಿ ಇದೆ. ಮರಣವನ್ನು ಗೆಲ್ಲುವ ಶಕ್ತಿ ಗಿಡಮೂಲಿಕೆ ಔಷಧಿಗಳಲ್ಲಿದೆ. ಪಂಚತಾರಾ ವೃಕ್ಷಗಳಲ್ಲಿ ಹೆಚ್ಚಿನ ಪ್ರಮಾಣದ ಆಮ್ಲಜನಕ ಉತ್ಪತ್ತಿ ಆಗುತ್ತದೆ. ಇವು ದೈವವೃಕ್ಷಗಳೆಂದು ಪರಿಗಣಿಸಲ್ಪಟ್ಟಿವೆ ಎಂದು ತಿಳಿಸಿದರು.

ಇದನ್ನೂ ಓದಿ: Relationship: ಈ ಮೂರು ವಿಷಯಗಳನ್ನು ನಿಮ್ಮ ಸಂಗಾತಿಗೆ ಎಂದಿಗೂ ಹೇಳಬೇಡಿ, ಅವು ನಿಮ್ಮ ಸಂಬಂಧವನ್ನು ಹಾಳುಮಾಡುತ್ತವೆ