Home News Junk Food: ಸಮೋಸ -ಜಿಲೇಬಿ ಪ್ರಿಯರೇ ಹುಷಾರ್ – ತಂಬಾಕಿನಷ್ಟೇ ಇವೂ ಡೇಂಜರ್ ಎಂದ ವರದಿ!!

Junk Food: ಸಮೋಸ -ಜಿಲೇಬಿ ಪ್ರಿಯರೇ ಹುಷಾರ್ – ತಂಬಾಕಿನಷ್ಟೇ ಇವೂ ಡೇಂಜರ್ ಎಂದ ವರದಿ!!

Hindu neighbor gifts plot of land

Hindu neighbour gifts land to Muslim journalist

Junk Food: ಜಂಕ್ ಫುಡ್ ಆರೋಗ್ಯಕ್ಕೆ ಹಾನಿಕಾರಕ ಎಂದು ಅನೇಕ ವರದಿಗಳು ತಿಳಿಸಿದರು ಕೂಡ ನಮ್ಮ ಜನರಿಗೆ ಅವುಗಳ ಮೇಲೆಯೇ ಬಲು ಪ್ರೀತಿ. ಎಲ್ಲಿ ಕಂಡರೂ ಕೂಡ ಬಿಡದೆ ಜಂಕ್ ಫುಡ್ ತಿನ್ನುತ್ತಾರೆ. ಇನ್ನು ಈ ಜಂಕ್ ಫುಡ್ಗಳ ಪೈಕಿ ಸಮೋಸ ಕೂಡ ಒಂದು. ಜೊತೆಗೆ ಜಿಲೇಬಿಯು ಸೇರುತ್ತದೆ. ಜಂಕ್ ಫುಡ್ ಪ್ರಿಯರಲ್ಲಿ ಅನೇಕರಿಗೆ ಈ ಎರಡು ತಿನಿಸುಗಳ ಮೇಲಂತೂ ಬಲು ಪ್ರೀತಿ. ಖಾರವಾದ ಸಮೋಸವನ್ನು ತಿಂದು ಸಿಹಿಯಾದ ಜಿಲೇಬಿ ತಿನ್ನುವುದು ಏನೋ ಒಂದು ರೀತಿಯ ಸಂತಸ. ಆದರೆ ಈಗ ಇನ್ನು ಮುಂದೆ ಈ ಸಮೋಸ ಮತ್ತು ಜಿಲೇಬಿಯನ್ನು ತಿನ್ನುವರು ಕೊಂಚ ಯೋಚಿಸಬೇಕಾದ ಸ್ಥಿತಿ ಎದುರಾಗಿದೆ.

ಯಾಕೆಂದರೆ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು (Union Health Ministry) ಇನ್ಮುಂದೆ ಸಮೋಸ (Samosa), ಜಿಲೇಬಿ (Jalebi) ಸೇರಿದಂತೆ ಇನ್ನಿತರೆ ತಿನಿಸುಗಳಿಗೂ ಸಿಗರೇಟ್ ಪ್ಯಾಕೆಟ್‌ನಲ್ಲಿರುವಂತೆ ಎಚ್ಚರಿಕೆ ನೀಡಲು ಮುಂದಾಗಿದೆ.

ಹೌದು, ಕೇಂದ್ರ ಆರೋಗ್ಯ ಸಚಿವಾಲಯದ ಆದೇಶದ ಹಿನ್ನೆಲೆ ನಾಗ್ಪುರದ AIIMS (Nagpur AIIMS) ಸಂಸ್ಥೆಯ ತಜ್ಞರು ಭಾರತೀಯ ತಿಂಡಿಗಳ ಬಗ್ಗೆ ಅಧ್ಯಯನ ನಡೆಸಿದೆ. ಈ ವರದಿಯಲ್ಲಿ ಎಣ್ಣೆ ಮತ್ತು ಸಕ್ಕರೆ ಬಳಸಿ ತಯಾರಿಸುವ ತಿಂಡಿಗಳಲ್ಲಿ ಕೊಬ್ಬು ಮತ್ತು ಸಕ್ಕರೆಯ ಅಂಶ ಹೆಚ್ಚಾಗಿರುತ್ತದೆ. ಹೀಗಾಗಿ ಸಮೋಸ ಮತ್ತು ಜಿಲೇಬಿ ಪದೇ ಪದೇ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ. ಇದು ಹಲವು ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ತಿಳಿಸಿದೆ. ಹೀಗಾಗಿ ರೋಗಕ್ಕೆ ಕಾರಣವಾಗುವ ಆಹಾರಗಳ ಮೇಲೆ ಸಿಗರೇಟ್ ಶೈಲಿಯ ಆರೋಗ್ಯ ಎಚ್ಚರಿಕೆಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಅಭಿಯಾನವನ್ನು ಮೊದಲು ನಾಗ್ಪುರದಲ್ಲಿ ಆರಂಭಿಸಲಾಗುತ್ತಿದೆ. ಮಹಾರಾಷ್ಟ್ರದ ನಾಗಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್ ನಾಗ್ಪುರ)ದಲ್ಲಿ ಈ ಯೋಜನೆಯನ್ನು ಮೊದಲಿಗೆ ಪೈಲಟ್ ಪ್ರಾಜೆಕ್ಟ್ ಆಗಿ ಜಾರಿಗೊಳಿಸಲಾಗುತ್ತಿದೆ. ಏಮ್ಸ್ ಕ್ಯಾಂಪಸ್‌ನಲ್ಲಿರುವ ಕೆಫೆಟೇರಿಯಾಗಳು ಮತ್ತು ಸಾರ್ವಜನಿಕ ಊಟದ ಸ್ಥಳಗಳು ಆಹಾರ ಕೌಂಟರ್‌ಗಳ ಪಕ್ಕದಲ್ಲಿ ಓದಲು ಸುಲಭವಾದ ಎಚ್ಚರಿಕೆ ಫಲಕಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಪೈಲಟ್ ಪ್ರಾಜೆಕ್ಟ್ ಯಶಸ್ವಿಯಾದ ಬಳಿಕ ದೇಶದ ಎಲ್ಲ ಕಡೆ ಈ ಆರೋಗ್ಯ ಎಚ್ಚರಿಕೆ ನೀಡಲಾಗುತ್ತೆ.

ಇದನ್ನೂ ಓದಿ: DGCA New Rule: ಭಾರತದಲ್ಲಿ ವಿಮಾನ ಹಾರಾಟಗಳಿಗೆ ಸರ್ಕಾರದಿಂದ ಹೊಸ ನಿಯಮ: ಏನೆಲ್ಲಾ ಬದಲಾವಣೆಗಳಿರಲಿದೆ?