KEA: ಕೆಇಎ, ಕಾಮೆಡ್-ಕೆ ವೇಳಾಪಟ್ಟಿ ಪ್ರಕಟ

Bangalore: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಪ್ರಕಟ ಮಾಡಿದೆ. ಕಾಮೆಡ್ ಕೆ ಕೂಡಾ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ.

ಸರಕಾರ ಮಾಡಿರುವ ಒಪ್ಪಂದದ ಪ್ರಕಾರ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೊದಲು ಕೌನ್ಸಲಿಂಗ್ ನಡೆಸಲಿದೆ. ಪ್ರಾಧಿಕಾರದ ವೇಳಾಪಟ್ಟಿಯ ಪ್ರಕಾರ ಜುಲೈ 18 ರಂದು ಪ್ರಕ್ರಿಯೆ ಪ್ರಾರಂಭವಾಗಿ ಜುಲೈ 28 ರಂದು ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಬಿಡುಗಡೆ ಮಾಡಲಾಗುವುದು.
ಜುಲೈ 18 ರಂದು ಕಾಮೆಡ್ ಕೆ ಕೌನ್ಸಲಿಂಗ್ ಆರಂಭಗೊಳ್ಳಲಿದ್ದು, ಆಗಸ್ಟ್ 4 ರಂದು ಮುಕ್ತಾಯವಾಗಲಿದೆ. ಜುಲೈ 18 ರಿಂದ ಕಾಮೆಡ್ ಕೆ ಆಪ್ಶನ್ ಎಂಟ್ರಿ ಆಗಲಿದೆ. ಜುಲೈ 20 ರವರೆಗೆ ವಿದ್ಯಾರ್ಥಿಗಳು ಆಯ್ಕೆ ದಾಖಲು ಮಾಡಬಹುದಾಗಿದೆ. ಜುಲೈ 28 ರಂದು ಸೀಟು ಹಂಚಿಕೆ ಫಲಿತಾಂಶ ಬಿಡುಗಡೆ ಮಾಡಲಾಗುವುದು. ಆಗಸ್ಟ್ 4 ರವರೆಗೆ ಕಾಲೇಜುಗಳಿಗೆ ಹೋಗಿ ಪ್ರವೇಶ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.
Comments are closed.