UP: ಕನ್ವರ್ ಯಾತ್ರಿಕರಿಗೆ ಜ್ಯೂಸ್ ನಲ್ಲಿ ಮೂತ್ರ ಬೆರೆಸಿ ಮಾರಾಟ – ಅಂಗಡಿ ಮಾಲಕ ಅರೆಸ್ಟ್, 1 ಲೀ ಮೂತ್ರ ವಶಕ್ಕೆ!!

Share the Article

UP: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ (Ghaziabad) ಕನ್ವರ್‌ ಯಾತ್ರೆಗೆ ಹೋಗುವ ಪ್ರಯಾಣಿಕರಿಗೆ ಜ್ಯೂಸ್‌ ಅಂಗಡಿ ಮಾಲೀಕನೊಬ್ಬ ಮೂತ್ರ ಬೆರೆಸಿದ (vendor caught selling urine mixed juice) ಜ್ಯೂಸನ್ನು ಗ್ರಾಹಕರಿಗೆ ಮಾರಾಟ ಮಾಡಿ ಸಿಕ್ಕಿ ಬಿದ್ದಿದ್ದಾನೆ.

ಹೌದು ಕನ್ವರ್‌ ಯಾತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಅಮೀರ್ ಖಾನ್ ಎಂಬಾತನ ಜ್ಯೂಸ್ ಅಂಗಡಿ ಇದ್ದು, ಇಲ್ಲಿ ಈತ ಮೂತ್ರ ಬೆರೆಸಿದ ಜ್ಯೂಸನ್ನು ಮಾರಾಟ ಮಾಡುತ್ತಿದ್ದನು. ಈ ವೇಳೆ ರೆಡ್‌ ಹ್ಯಾಂಡ್‌ ಆಗಿ ಈತ ಸಿಕ್ಕಿ ಬಿದ್ದಿದ್ದು, ಸದ್ಯ ಆರೋಪಿಯನ್ನು ಬಂಧಿಸಿ, ಆತನ ಅಂಗಡಿಯಲ್ಲಿದ್ದ 1 ಲೀ ಮೂತ್ರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕುರಿತ ವಿಡಿಯೋವನ್ನು Megh Updates ಹೆಸರಿನ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದ್ದು, “ಕನ್ವರ್‌ ಯಾತ್ರಾ ಮಾರ್ಗದಲ್ಲಿ ಮೂತ್ರ ಮಿಶ್ರಿತ ಜ್ಯೂಸ್‌ ಮಾರಾಟ ಮಾಡುತ್ತಿದ್ದ ಮುಸ್ಲಿಂ ಜ್ಯೂಸ್‌ ಮಾರಾಟಗಾರ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ಇದನ್ನೂ ಓದಿ: Saroja devi: ನಾಳೆ ಚನ್ನಪಟ್ಟಣದ ದಶಾವರದಲ್ಲಿ ಅಭಿನಯ ಸರಸ್ವತಿ ಬಿ.ಸರೋಜಾದೇವಿ ಅಂತ್ಯಕ್ರಿಯೆ

Comments are closed.