Surathkal: ಟ್ಯಾಂಕರ್ ಚಾಲನೆ ವೇಳೆ ದಿಢೀರ್ ಅಸ್ವಸ್ಥಗೊಂಡು ರಕ್ತ ವಾಂತಿ ಮಾಡಿದ ಚಾಲಕ

Surathkal: ಎಲ್‌ಪಿಜಿ ಅನಿಲ ತುಂಬಿಕೊಳ್ಳಲು ಬರುತ್ತಿದ್ದ ಚಾಲಕರೊಬ್ಬರು ಅಸ್ವಸ್ಥಗೊಂಡ ಘಟನೆ ಕುಳಾಯಿ ರೈಲ್ವೆ ಬ್ರಿಡ್ಜ್ ಬಳಿ ಭಾನುವಾರ (ಜು.13) ಮಧ್ಯಾಹ್ನ ನಡೆದಿದೆ.

ಎಚ್‌ಪಿಸಿಎಲ್‌ನಿಂದ ಅನಿ ತುಂಬಿಕೊಳ್ಳಲೆಂದು ಹೋಗುತ್ತಿದ್ದ ಸಂದರ್ಭದಲ್ಲಿ ಚಾಲಕನಿಗೆ ಅನಾರೋಗ್ಯ ಉಂಟಾಗಿ, ರಕ್ತವಾಂತಿ ಮಾಡಿದ್ದಾರೆ. ಕೂಡಲೇ ಚಾಲಕ ಹ್ಯಾಂಡ್ ಬ್ರೇಕ್ ಹಾಕಿ ವಾಹನವನ್ನು ನಿಲ್ಲಿಸಿದ್ದು, ಇದರಿಂದ ಭಾರೀ ಅಪಘಾತ ತಪ್ಪಿದೆ.
ಕೂಡಲೇ ಅಸ್ವಸ್ಥಗೊಂಡ ಚಾಲಕನನ್ನು ಸ್ಥಳೀಯರು ಆಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
Comments are closed.