Free Bus: ರಾಜ್ಯ ಸರಕಾರದಿಂದ ಗುಡ್‌ನ್ಯೂಸ್: ಒಂದು ಪಾಸ್ ಇದ್ದರೆ ನಾಲ್ಕು ನಿಗಮಗಳ ಬಸ್‌ನಲ್ಲಿ ಸಂಚರಿಸಲು ಅವಕಾಶ

Free Bus: ಮಹಿಳೆಯರಿಗೆ ಫ್ರೀ ಬಸ್ ನೀಡಿದ್ದ ಸರಕಾರ ಈಗ ಅಂಧತ್ವ ಹೊಂದಿರೋ ವಿಶೇಷ ಚೇತನರಿಗಾಗಿ ಸಿಹಿ ಸುದ್ದಿ ನೀಡಿದೆ. ರಾಜ್ಯ ಸಾರಿಗೆ 4 ನಿಗಮಗಳಲ್ಲಿ ಉಚಿತವಾಗಿ ಓಡಾಡಲು ಅವಕಾಶ ನೀಡಲಾಗಿದೆ.

ಮಹಿಳೆಯರಿಗೆ ಫ್ರೀ ಮಾಡಿದ್ದ ಸರಕಾರ, ಈಗ ಅಂಧತ್ವ ಹೊಂದಿರುವ ವಿಶೇಷ ಚೇತನರಿಗಾಗಿ ಮಹತ್ವದ ಆದೇಶ ಹೊರಡಿಸಿದೆ. ಅಂಧತ್ವ ಹೊಂದಿರುವ ವಿಶೇಷ ಚೇತನರಿಗಾಗಿ ಮಹತ್ವದ ಆದೇಶ ಹೊರಡಿಸಿದ್ದು, ರಾಜ್ಯವ್ಯಾಪಿ ಉಚಿತ ಪ್ರಯಾಣ ಮಾಡಲು ಅವಕಾಶ ನೀಡಿದೆ. ಈ ಹಿಂದೆ ನಾಲ್ಕು ನಿಗಮಗಳ ಪೈಕಿ ಯಾವ ನಿಗಮದ ಬಸ್‌ಪಾಸ್ ಇತ್ತೋ ಆ ಬಸ್‌ನಲ್ಲಿ ಮಾತ್ರ ಅಂಧತ್ವ ಇದ್ದವರು ಓಡಾಟ ಮಾಡಲು ಅವಕಾಶ ಇತ್ತು. ಬೆಂಗಳೂರಿನಲ್ಲಿರೋ ಹಲವರು ಬಿಎಂಟಿಸಿ ಬಸ್‌ನಲ್ಲಿ ಓಡಾಡಲು ಅವಕಾಶ ಇದ್ದಿದ್ದು, ಕೆಎಸ್‌ಆರ್‌ಟಿಸಿಯಲ್ಲಿ ಓಡಾಡಬೇಕಾದರೆ ಹಣ ಪಾವತಿ ಮಾಡಿ ಓಡಾಡಬೇಕಿತ್ತು.
ರಾಜ್ಯ ಸರಕಾರವು ಹೊಸದಾಗಿ ತೆಗೆದುಕೊಂಡ ಈ ನಿರ್ಧಾರ ಎಲ್ಲಾ ಅಂಧ ವಿಶೇಷ ಚೇತನರಿಗೆ ಅನುಕೂಲ ಆಗಲಿದೆ.
Comments are closed.