

Madhyapradesh: ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ರಸ್ತೆ ಸರಿಪಡಿಸಿ ಎಂದು ಗರ್ಭಿಣಿಯೊಬ್ಬರು ಇಟ್ಟ ಬೇಡಿಕೆಗೆ ಬಿಜೆಪಿಯ ಸಂಸದರೊಬ್ಬರು ಪ್ರತಿಕ್ರಿಯೆ ನೀಡಿದ ವಿಚಾರ ಇದೀಗ ಭಾರೀ ಕೋಲಾಹಲ ಎಬ್ಬಿಸಿದೆ. ಮಧ್ಯಪ್ರದೇಶದ ಖಡ್ಡಿ ಕುರ್ದ್ ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮ ಹಿಂದುಳಿದ ಗ್ರಾಮವಾಗಿದ್ದು, ಸರಿಯಾದ ರಸ್ತೆ ಇಲ್ಲ. ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸರಿಯಾದ ರಸ್ತೆಯಿಲ್ಲದೆ ಜನ ಪರಾಡುವಂತಾಗಿದೆ. ಈ ಕುರಿತು ಯೂಟ್ಯೂಬರ್ ಒಬ್ಬರು ವಿಡಿಯೋ ಮಾಡಿ ಎಂಟು ಮಂದಿ ಗರ್ಭಿಣಿಯರ ಸಂದರ್ಶನ ಮಾಡಿದ್ದು, ಸಂಸದರ ಬಳಿ ರಸ್ತೆಗಾಗಿ ಬೇಡಿಕೆ ಇಟ್ಟಿದ್ದರು.
ಈ ಕುರಿತು ಸ್ಥಳೀಯ ಬಿಜೆಪಿ ಸಂಸದರಾದ ರಾಜೇಶ್ ಮಿಶ್ರಾ ಅವರಲ್ಲಿ ಆಸ್ಪತ್ರೆಯವರೆಗಾದರೂ ಉತ್ತಮ ರಸ್ತೆ ನಿರ್ಮಿಸಿ ಕೊಡಲು ಕೇಳಿದಾಗ, ಅವರು ನಮ್ಮ ಬಳಿ ಆಂಬುಲೆನ್ಸ್ ಇದೆ. ನಮ್ಮ ಬಳಿ ವ್ಯವಸ್ಥೆ ಇದೆ. ಡೆಲಿವರಿಯ ಡೇಟ್ ಮೊದಲೇ ಎಲ್ಲರಿಗೂ ಗೊತ್ತಿರುತ್ತದೆ. ಹೆರಿಗೆಯ ಡೇಟ್ ಹೇಳಿ, ಎತ್ತಾಕ್ಕೊಂಡು ಬರಲು ನಾನೇ ಗಾಡಿ ಕಳುಹಿಸುತ್ತೇನೆ ಎಂದು ಹೇಳಿದ್ದಾರೆ.
ಈ ಪ್ರತಿಕ್ರಿಯೆಗೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.













