Bengaluru: ಬನ್ನೇರುಘಟ್ಟ ಉದ್ಯಾನವನ ಪ್ರವೇಶ ಟಿಕೆಟ್‌ ದರ ಏರಿಕೆ: ಆಗಸ್ಟ್ 1ರಿಂದಲೇ ಜಾರಿಗೆ!

Share the Article

Bengaluru: ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರವೇಶಕ್ಕೆ, ಕಳೆದ ಐದು ವರ್ಷಗಳಿಂದ ದರ ಏರಿಕೆ ಆಗದಿರುವ ಹಿನ್ನೆಲೆಯಲ್ಲಿ, ಸರ್ಕಾರ ಇದೀಗ ಶೇಕಡಾ 20ರಷ್ಟು ಟಿಕೆಟ್ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ನೀಡಿದ ಮಾಹಿತಿ ಪ್ರಕಾರ, ನೂತನ ದರಗಳು ಹೀಗಿವೆ:
ವಯಸ್ಕರಿಗೆ ಟಿಕೆಟ್ ದರ ಈಗಿನ ₹100ರಿಂದ ₹120ಕ್ಕೆ ಏರಿಕೆ
ಮಕ್ಕಳಿಗೆ ಟಿಕೆಟ್ ದರ ₹50 ರಿಂದ ₹60ಕ್ಕೆ ಏರಿಕೆ
ಹಿರಿಯ ನಾಗರಿಕರಿಗೆ ಟಿಕೆಟ್ ದರ ₹60 ರಿಂದ ₹70ಕ್ಕೆ ಏರಿಕೆ
ಇಷ್ಟೇ ಅಲ್ಲದೇ, ಸಫಾರಿ ಕಾಂಬೋ ಪ್ಯಾಕ್ ದರದಲ್ಲೂ ಹೆಚ್ಚಳ ಮಾಡಲಾಗಿದೆ. ವಾರದ ದಿನಗಳಲ್ಲಿ ಈಗಿನ ₹350ರ ದರವನ್ನು ₹370ಕ್ಕೆ, ಹಾಗೂ ವಾರಾಂತ್ಯದಲ್ಲಿ ₹400ರ ದರವನ್ನು ₹420ಕ್ಕೆ ಏರಿಸಲಾಗಿದೆ.

ಮೃಗಾಲಯ ಪ್ರಾಧಿಕಾರ ಶೇಕಡಾ 50ರಷ್ಟು ದರ ಏರಿಕೆಗೆ ಸರ್ಕಾರಕ್ಕೆ ಮನವಿ ಮಾಡಿದ್ದರೂ, ಸರ್ಕಾರ ಶೇಕಡಾ 20ರಷ್ಟು ಮಾತ್ರ ಒಪ್ಪಿಗೆ ನೀಡಿದೆ. ಆಗಸ್ಟ್ 1ರಿಂದ ಈ ಹೊಸ ದರಗಳು ಜಾರಿಗೆ ಬರಲಿವೆ ಎಂದು ಮೃಗಾಲಯ ಪ್ರಾಧಿಕಾರ ಪ್ರಕಟಿಸಿದೆ.

Comments are closed.