Sullia: ಜ್ವರದಿಂದ ಬಳಲುತ್ತಿದ್ದ ಬಾಲಕಿಗೆ ಗರ್ಭಿಣಿ ಎಂದು ವರದಿ ನೀಡಿದ ವೈದ್ಯಾಧಿಕಾರಿ ವಿರುದ್ಧ ದೂರು

Share the Article

Sullia: ಜ್ವರದಿಂದ ಬಳಲುತ್ತಿದ್ದ ಶಾಲಾ ಬಾಲಕಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತಂದಿದ್ದ ಸಂದರ್ಭದಲ್ಲಿ ವೈದ್ಯಾಧಿಕಾರಿ ಆಕೆ ಗರ್ಭಿಣಿ ಎಂದು ವರದಿ ನೀಡಿದ್ದಾರೆ ಎನ್ನುವ ಆರೋಪದಲ್ಲಿ ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆಗೆ ದೂರು ದಾಖಲು ಮಾಡಲಾಗಿರುವ ಕುರಿತು ವರದಿಯಾಗಿದೆ.

ಜುಲೈ 1,2025 ರಂದು ಬಲಕಿ ತನ್ನ ಹೆತ್ತವರ ಜೊತೆ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜ್ವರದ ಚಿಕಿತ್ಸೆಗೆಂದು ಬಂದಿದ್ದು, ಅಲ್ಲಿದ್ದ ವೈದ್ಯಾಧಿಕಾರಿ ಬಾಲಕಿಯನ್ನು ತಪಾಸಣೆ ಮಾಡಿ ಹೊರರೋಗಿಗಳ ದಾಖಲಾತಿಯಲ್ಲಿ ಯಪಿಟಿ ಪಾಸಿಟಿವ್‌ (ಗರ್ಭಿಣಿ) ಎಂದು ದಾಖಲು ಮಾಡಿ, ಮುಂದಿನ ತಪಾಸಣೆಗೆಂದು ಸುಳ್ಯ ಸರಕಾರಿ ಆಸ್ಪತ್ರೆಗೆ ಹೋಗಲು ಸೂಚನೆ ನೀಡಿದ್ದರು.

ಇದರಿಂದ ಆಘಾತಕ್ಕೊಳಗಾದ ಹೆತ್ತವರು ಬಾಲಕಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ಪರಿಶೀಲನೆ ಮಾಡಿಸಿದಾಗ ಗರ್ಭಿಣಿ ಅಲ್ಲ ಎಂದು ವರದಿ ಬಂತು. ಸುಳ್ಯ ಸರಕಾರಿ ಆಸ್ಪತ್ರೆಯಲ್ಲೂ ಗರ್ಭ ಧರಿಸಿದ ಕುರಿತು ಯಾವುದೇ ದೃಢೀಕರಣ ಸಿಗಲಿಲ್ಲ.

ಇದೀಗ ವೈದ್ಯಾಧಿಕಾರಿ ಬಾಲಕಿ ಗರ್ಭಿಣಿ ಎಂದು ಎಲ್ಲರಿಗೂ ತಿಳಿಸಿದ್ದಾರೆ ಎನ್ನುವ ಆರೋಪವಿದ್ದು, ಸುಳ್ಳು ಮಾಹಿತಿಯು ಸಾರ್ವಜನಿಕವಾಗಿ ಹರಡಿರುವ ಕಾರಣ 13 ರ ಬಾಲಕಿ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದು, ಈಕೆಯ ಕುಟುಂಬ ಮಾನಸಿಕವಾಗಿ ನೋವು ಅನುಭವಿಸಿದ್ದಾರೆ.

ಇದೀಗ ಹೆತ್ತವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದಾಖಲೆಗಳ ಸಹಿತ ದೂರು ಸಲ್ಲಿಸಿರುವ ಕುರಿತು ವರದಿಯಾಗಿದೆ. ಈ ಘಟನೆ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ತನಿಖೆಗಾಗಿ ತಂಡ ರಚಿಸಿದ್ದಾರೆ. ಜುಲೈ 10 ರಂದು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ತನಿಖೆಯಲ್ಲಿ ತಪ್ಪು ಕಂಡರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಚ್‌ಒ ತಿಳಿಸಿದ್ದಾರೆ.

Comments are closed.