Uttara Kannada: ದಟ್ಟ ಅರಣ್ಯದಲ್ಲಿ ಗುಹೆಯಲ್ಲಿ ಮಕ್ಕಳೊಂದಿಗೆ ರಷ್ಯಾ ಮೂಲದ ವಿದೇಶಿ ಮಹಿಳೆಯ ವಾಸ, ರಕ್ಷಣೆ

KarawaraL ಹಿಂದೂ ಧರ್ಮದ ಧಾರ್ಮಿಕತೆಯಿಂದ ಪ್ರಭಾವಿತಳಾದ ರಷ್ಯಾ ಮೂಲದ ಮಹಿಳೆಯೊಬ್ಬರು ತನ್ನ ಇಬ್ಬರು ಪುಟ್ಟ ಮಕ್ಕಳ ಜೊತೆ ದಟ್ಟಾರಣ್ಯದಲ್ಲಿ ಗುಹೆಯೊಂದರಲ್ಲಿ ಏಕಾಂತವಾಗಿ ವಾಸವಿದ್ದಿದ್ದು, ಇವರನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ರಾಮತೀರ್ಥದ ಅರಣ್ಯದಲ್ಲಿ ರಕ್ಷಣೆ ಮಾಡಿದ ಘಟನೆ ನಡೆದಿದೆ.

ಮೋಹಿ (40) ಎಂಬ ಮಹಿಳೆ ತನ್ನ ಮಕ್ಕಳಾದ ಪ್ರೆಯಾ (06), ಅಮಾ (4) ರಕ್ಷಣೆಗೊಂಡ ರಷ್ಯಾ ಮೂಲದ ಪ್ರಜೆಗಳು.
ಬಿಸೆನೆಸ್ ವಿಸಾ ಮೂಲಕ ರಷ್ಯಾದಿಂದ ಗೋವಾ ಮೂಲಕ ಗೋಕರ್ಣಕ್ಕೆ ಬಂದು ದಟ್ಟ ಅರಣ್ಯ ರಾಮತೀರ್ಥ ಬಳಿಯ ಗುಹೆಯಲ್ಲಿ ತನ್ನ ಮಕ್ಕಳ ಜೊತೆ ವಾಸವಿದ್ದಳು. ಚಿಕ್ಕ ರುದ್ರನ ಮೂರ್ತಿ ಇಟ್ಟುಕೊಂಡು ಪೂಜಾ ಕಾರ್ಯ ಮಾಡುತ್ತಾ ಅಲ್ಲೇ ನೆಲೆಸಿದ್ದಳು. ಸಿಪಿಐ ಶ್ರೀಧರ್ ಅವರ ತಂಡ ಗುಡ್ಡ ಕುಸಿತದ ಕಾರಣದಿಂದ ಗಸ್ತು ತಿರುಗುವ ಸಂದರ್ಭದಲ್ಲಿ ಯಾರೋ ವಾಸವಾಗಿರುವುದು ಕಂಡು, ಇವರನ್ನು ರಕ್ಷಣೆ ಮಾಡಿದ್ದಾರೆ.
ಮಹಿಳೆಗೆ ಆಧ್ಯಾತ್ಮದ ಒಲವು ಹೆಚ್ಚಿದ್ದು, ಪ್ರಕೃತಿಯಲ್ಲಿ ಇರಬೇಕು ಎಂದು ಮಕ್ಕಳ ಜೊತೆ ಏಕಾಂಗಿಯಾಗಿ ಗುಹೆ ಸೇರಿದ್ದಳು. ಎಸ್.ಪಿ ಎಂ ನಾರಾಯಣ ಸಲಹೆ ಮೇರೆಗೆ ಆಕೆಗೆ ಸ್ಥಳೀಯ ಎನ್ಜಿಓ ಮೂಲಕ ಆಪ್ತ ಸಮಾಲೋಚನೆ ಮಾಡಿ ಬೆಂಗಲೂರಿಗೆ ಕಳುಹಿಸಿಕೊಡಲಾಗಿದ್ದು, ರಷ್ಯಾ ರಾಯಭಾರ ಕಚೇರಿಯನ್ನು ಸಂಪರ್ಕ ಮಾಡಿ ಆಕೆಯನ್ನು ಪುನಃ ಆಕೆಯ ದೇಶಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
Comments are closed.