Health Department : ಸೊಳ್ಳೆಗಳ ವಿರುದ್ಧ ಸಮರ ಸಾರಿದ ರಾಜ್ಯ ಸರ್ಕಾರ – ನಿಯಂತ್ರಣಕ್ಕೆ 7ಕೋಟಿ ವ್ಯಯಿಸಿ 1,500 ಸ್ವಯಂ ಸೇವಕರ ನೇಮಿಸಲು ಸಿದ್ಧತೆ

Share the Article

Health Department : ಸಾಂಕ್ರಾಮಿಕ ರೋಗಗಳಾದ ಡೆಂಗಿ ಹಾಗೂ ಚಿಕೂನ್‌ಗುನ್ಯಾ ನಿಯಂತ್ರಣಕ್ಕೆ ವಿಶೇಷ ಅಭಿಯಾನ ಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ಇದೀಗ ಸೊಳ್ಳೆಗಳ ವಿರುದ್ಧ ಸಮರ ಸಾರಿದೆ. ಆರೋಗ್ಯ ಇಲಾಖೆಯು ಈ ಅಭಿಯಾನಕ್ಕಾಗಿ ₹ 7.25 ಕೋಟಿ ವೆಚ್ಚ ಮಾಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.

 

ಹೌದು, ಸಾಂಕ್ರಾಮಿಕ ರೋಗಗಳಾದ ಚಿಕುನ್ ಗುನ್ಯಾ, ಡೆಂಗಿ ಖಾಯಿಲೆಗಳ ಪರಿಣಾಮಕಾರಿಯಾಗಿ ನಿಯಂತ್ರಿಸಲು ವಿಶೇಷ ಅಭಿಯಾನ ರೂಪದಲ್ಲಿ ಮುಂಜಾಗ್ರತಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ನೀರಿನ ಮೂಲಗಳಲ್ಲೇ ಲಾರ್ವಾ ನಿರ್ಮೂಲನೆಗೆ ರಾಜ್ಯಾದ್ಯಂತ 1500 ಸ್ವಯಂ ಸೇವಕರನ್ನು ನೇಮಿಸಿ ನಿತ್ಯ 400 ರೂ ಕೂಲಿ ನೀಡಲು ಆರು ಕೋಟಿ ರು. ವೆಚ್ಚ ಸೇರಿ ರೋಗ ನಿಯಂತ್ರಣದ ವಿವಿಧ ಕ್ರಮಗಳಿಗಾಗಿ ಒಟ್ಟು 7.25 ಕೋಟಿ ರು. ವೆಚ್ಚ ಮಾಡುವ ಪ್ರಸ್ತಾಪಕ್ಕೆ ಇಲಾಖೆ ಅನುಮೋದನೆ ನೀಡಿದೆ.

 

ರೋಗ ಹರಡುವ ವೈರಾಣುಗಳನ್ನು ಪತ್ತೆ ಮಾಡಲು ತಂತ್ರಜ್ಞಾನದ ಅಳವಡಿಕೆ, ಈಡಿಸ್ ಲಾರ್ವಾ ನಿರ್ಮೂಲನೆಗೆ ಸ್ವಯಂ ಸೇವಕರ ನಿಯೋಜನೆ, ಡೆಂಗಿ ಪರೀಕ್ಷೆಗೆ ಕಿಟ್‌ಗಳ ಖರೀದಿ ಸೇರಿ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Comments are closed.