Bhatkala Bomb Threat: ಭಟ್ಕಳ ಪಟ್ಟಣ ಸ್ಫೋಟ ಮಾಡುವುದಾಗಿ ಬಾಂಬ್ ಬೆದರಿಕೆ ಇ-ಮೇಲ್, ಪೊಲೀಸರಿಂದ ತೀವ್ರ ಶೋಧ

Bhatkala: ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಭಟ್ಕಳ ಪಟ್ಟಣ ಸ್ಫೋಟ ಮಾಡುವುದಾಗಿ ಇ-ಮೇಲ್ ಬಂದಿದ್ದು, ಭಟ್ಕಳ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಭಟ್ಕಳ ಶಹರ ಪೊಲೀಸ್ ಠಾಣೆಗೆ ಇ-ಮೇಲ್ ಸಂದೇಶವೊಂದು ನಿನ್ನೆ ಬೆಳಗ್ಗೆ 10.30ರ ಸುಮಾರಿಗೆ ಬಂದಿದೆ. ಬಾಂಬ್ ಇಟ್ಟು ಭಟ್ಕಳ ಪಟ್ಟಣ ಸ್ಫೋಟಿಸುವುದಾಗಿ ಇಮೇಲ್ ಬೆದರಿಕೆ ಮಾಡಲಾಗಿದೆ. kannnannandik@gmail.com ಇಮೇಲ್ ಐಡಿಯಿಂದ ಕಣ್ಣನ್ ಗುರುಸ್ವಾಮಿ ಎಂಬ ಹೆಸರಿನಲ್ಲಿ ಇಮೇಲ್ ಬಂದಿರುವ ಕುರಿತು ವರದಿಯಾಗಿದೆ.
ಪೊಲೀಸರು ಕೂಡಲೇ ಕೇಸ್ ದಾಖಲು ಮಾಡಿಕೊಂಡು ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿಕೊಂಡು ನಗರದ ಪ್ರಮುಖ ಸ್ಥಳವನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Viral News: ಪತ್ನಿಯನ್ನು ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್ಫಾರ್ಮ್ಗೇ ಬಂದ ಪತಿ
Comments are closed.