Share the Article

Mohan Bhagavat: ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮೂರನೇ ಅವಧಿಯಲ್ಲಿ ಪೂರ್ಣಾವಧಿಗೆ ಪ್ರಧಾನಿ ಆಗಿರುವುದಿಲ್ಲ, ಅವರು ಮಧ್ಯದಲ್ಲಿ ರಾಜಕೀಯ ನಿವೃತ್ತಿ ಹೊಂದುತ್ತಾರೆ ಎಂಬ ಸುದ್ದಿ ಮೊದಲಿನಿಂದಲೂ ಸದ್ದು ಮಾಡುತ್ತಿರುವುದೇ. ಇದುವರೆಗೂ ಕೊಂಚ ತಣ್ಣಗಾಗಿದ್ದ ಈ ಸುದ್ದಿ ಇದೀಗ ಮತ್ತೆ ಮುನ್ನಡೆಗೆ ಬಂದಿದೆ. ಕಾರಣ ಆರ್ ಎಸ್ ಎಸ್ ಸರಸಂಗ ಚಾಲಕ ಮೋಹನ್ ಭಾಗವತ್ ಅವರು ನೀಡಿರುವ ಹೇಳಿಕೆ.

ಹೌದು, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ ಹೇಳಿಕೆಯೊಂದು ಇದೀಗ ರಾಷ್ಟ್ರ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದ್ದು, ಕುತೂಹಲವನ್ನು ಸೃಷ್ಟಿಸಿದೆ. “ಒಬ್ಬ ವ್ಯಕ್ತಿ 75 ವರ್ಷ ದಾಟಿದ ನಂತರ ತನ್ನ ಜವಾಬ್ದಾರಿಗಳನ್ನ ವರ್ಗಾಯಿಸಿ ವಿಶ್ರಾಂತಿ ಪಡೆಯಬೇಕು” ಎಂದು ಭಾಗವತ್ ಹೇಳಿದ್ದು, ಇದು ಕೇವಲ ಸಾಮಾನ್ಯ ಸಂದೇಶವಲ್ಲ, ಬದಲಾಗಿ ಹೊಸ ಇಡೀ ರಾಷ್ಟ್ರದಲ್ಲೆ ಚರ್ಚೆಗೆ ಕಾರಣವಾಗುತ್ತಿದೆ.

ಅಂದಹಾಗೆ ಸಂದರ್ಶನ ಕಾರ್ಯಕ್ರಮ ಒಂದರಲ್ಲಿ ಮಾತನಾಡಿರುವ ಭಾಗವತವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಈ ವರ್ಷದ ಸೆಪ್ಟೆಂಬರ್ ವೇಳೆಗೆ ಮೋಹನ್ ಭಾಗವತ್ ಅವರಿಗೆ 74 ವರ್ಷ ವಯಸ್ಸಾಗುತ್ತದೆ. ಮುಂದಿನ ವರ್ಷ ಸೆಪ್ಟೆಂಬರ್‌’ನಲ್ಲಿ ಅವರಿಗೆ 75 ವರ್ಷ ತುಂಬಲಿದೆ. ಇದರೊಂದಿಗೆ, ಅವರ ಹೇಳಿಕೆಗಳ ಪ್ರಕಾರ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆಯೇ ಎಂಬ ಪ್ರಶ್ನೆಗಳು ಏಳುತ್ತಿವೆ. ಜೊತೆಗೆ ಅವರು ಮೋದಿಯವರಿಗೂ ಕೂಡ ಸೇರಿಸಿಕೊಂಡು ಈ ಮಾತು ಹೇಳಿದ್ದಾರೆ ಎಂಬ ಚರ್ಚೆಗಳು ಕೂಡ ನಡೆಯುತ್ತಿವೆ.

ಇನ್ನು ಶಿವಸೇನಾ ಸಂಸದ ಸಂಜಯ್ ರಾವತ್ ಪ್ರಮುಖ ಹೇಳಿಕೆಗಳನ್ನ ನೀಡಿದ್ದಾರೆ. “ಭಾಗವತ್ 75ನೇ ವಯಸ್ಸಿನಲ್ಲಿ ನಿವೃತ್ತರಾಗಲು ಬಯಸಿದರೆ, ಅದೇ ನಿಯಮವನ್ನು ಮೋದಿಗೂ ಅನ್ವಯಿಸಬೇಕು. ಅವರಿಗೆ ಈಗ 74 ವರ್ಷ ವಯಸ್ಸಾಗಿದೆ” ಎಂದು ಅವರು ಹೇಳಿದರು. ಬಿಜೆಪಿ ರಚಿಸಿದ 75 ವರ್ಷಗಳ ನಿವೃತ್ತಿ ವಯಸ್ಸಿನ ಸೂತ್ರವನ್ನ ಮೋದಿಗೂ ಅನ್ವಯಿಸಬೇಕೆಂದು ರಾವತ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Viral Video : ಶರವೇಗದಲ್ಲಿ ಬಂದು ಜಿಂಕೆಯನ್ನು ಹೊತ್ತೊಯ್ದ ರಣ ಹದ್ದು – ರೋಚಕ ವಿಡಿಯೋ ವೈರಲ್

Comments are closed.