Mumbai: ದಕ್ಷಿಣ ಭಾರತೀಯರು ಡ್ಯಾನ್ಸ್ ಮಾಡಲು, ಬಾರ್ ನಡೆಸಲು ಮಾತ್ರ ಯೋಗ್ಯ – ಶಿವಸೇನಾ ಶಾಸಕನಿಂದ ವಿವಾದಾತ್ಮಕ ಹೇಳಿಕೆ

Mumbai: ಮುಂಬೈನ ಶಾಸಕ ಭವನದಲ್ಲಿ ಶಿವಸೇನಾ ಶಾಸಕರು ಒಬ್ಬರಿಗೆ ಹಳಸಿದ ದಾಲ್ ನೀಡಲಾಗಿತ್ತು ಎಂದು ಹೋಟೆಲ್ ಮಾಲೀಕರಿಗೆ ಆ ಶಾಸಕರು ಕಪಾಳ ಮೋಕ್ಷ ಮಾಡಿದ ಪ್ರಕರಣ ಬಾರಿ ಸದ್ದು ಮಾಡಿತ್ತು. ಈ ಕುರಿತಾದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವೈರಲ್ ಆಗಿತ್ತು. ಇದಾದಮೇಲೆ ಆ ಶಿವಸೇನ ಶಾಸಕ ಇದೀಗ ದಕ್ಷಿಣ ಭಾರತೀಯರ ಕುರಿತು ನಾಲಿಗೆ ಹರಿಬಿಟ್ಟಿದ್ದಾರೆ.

ಹೌದು, ಊಟ ಸರಿ ಇಲ್ಲ ಎಂದು ಶಾಸಕರ ಕ್ಯಾಂಟೀನ್ ಗುತ್ತಿಗೆದಾರನಿಗೆ ಥಳಿಸಿದ್ದ ಶಿವಸೇನೆ ಶಾಸಕ ಸಂಜಯ್ ಗಾಯಕ್ವಾಡ್ ಇಂದು ದಕ್ಷಿಣ ಭಾರತೀಯರು ಬರೀ ಡ್ಯಾನ್ಸ್ ಬಾರ್ ಮತ್ತು ಲೇಡೀಸ್ ಬಾರ್‌ಗಳನ್ನು ನಡೆಸಲು ಮಾತ್ರ ಯೋಗ್ಯರು ಅವರಿಗೆ ಮಹಾರಾಷ್ಟ್ರದಲ್ಲಿ ಆಹಾರ ಪೂರೈಕೆ ಒಪ್ಪಂದಗಳನ್ನು ನೀಡಬಾರದು ಎನ್ನುವ ಮೂಲಕ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಈ ಕುರಿತಾಗಿ ಮಾತನಾಡಿದ ಅವರು ಶೆಟ್ಟಿ ಎಂಬ ಗುತ್ತಿಗೆದಾರನಿಗೆ ಗುತ್ತಿಗೆಯನ್ನು ಏಕೆ ನೀಡಲಾಯಿತು? ಅದನ್ನು ಮರಾಠಿ ವ್ಯಕ್ತಿಗೆ ನೀಡಿ. ನಾವು ಏನು ತಿನ್ನುತ್ತೇವೆ ಎಂದು ಅವರಿಗೆ ತಿಳಿದಿದೆ ಮತ್ತು ನಮಗೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡುತ್ತಾರೆ. ದಕ್ಷಿಣ ಭಾರತೀಯರು ಡ್ಯಾನ್ಸ್ ಬಾರ್, ಲೇಡೀಸ್ ಬಾರ್‌ಗಳನ್ನು ನಡೆಸುತ್ತಾರೆ ಮತ್ತು ಮಹಾರಾಷ್ಟ್ರದ ಸಂಸ್ಕೃತಿಯನ್ನು ಹಾಳು ಮಾಡುತ್ತಾರೆ. ಅವರು ನಮ್ಮ ಮಕ್ಕಳನ್ನು ಭ್ರಷ್ಟಗೊಳಿಸಿದ್ದಾರೆ. ಅವರು ಉತ್ತಮ ಆಹಾರವನ್ನು ಹೇಗೆ ನೀಡುತ್ತಾರೆ? ಎಂದು ಗಾಯಕ್ವಾಡ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Sigandhur: ಸಿಗಂದೂರು ಸೇತುವೆಗೆ ಬಿ ಎಸ್ ಯಡಿಯೂರಪ್ಪ ಹೆಸರು? ಹೈಕೋರ್ಟ್ ಮೆಟಿಲೇರಿದ ರೈತ
Comments are closed.