Home News Yadagiri : ಜಾತಿನಿಂದಲೇ ಕೇಸ್ ಗೆ ಹೆದರಿ ಯುವಕ ಆತ್ಮಹತ್ಯೆ – ಸುದ್ದಿ ಕೇಳಿ ತಂದೆಯೂ...

Yadagiri : ಜಾತಿನಿಂದಲೇ ಕೇಸ್ ಗೆ ಹೆದರಿ ಯುವಕ ಆತ್ಮಹತ್ಯೆ – ಸುದ್ದಿ ಕೇಳಿ ತಂದೆಯೂ ‘ಹೃದಯಾಘಾತಕ್ಕೆ’ ಬಲಿ!!

Hindu neighbor gifts plot of land

Hindu neighbour gifts land to Muslim journalist

Yadagiri : ಜಾತಿ ನಿಂದನೆ ವಿಚಾರವಾಗಿ ಕೇಸ್ ದಾಖಲಾಗಿದ್ದು, ಇದಕ್ಕೆ ಹೆದರಿದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವಿಚಾರವನ್ನು ತಿಳಿದ ಆತನ ತಂದೆಯು ಕೂಡ ಹೃದಯಘಾತಕ್ಕೆ ಈಡಾಗಿ ಸಾವನ್ನಪ್ಪಿರುವ ಅಮಾನುಷ ಘಟನೆ ಎಂದು ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ.

ಹೌದು, ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಜಮೀನಿನ ದಾರಿ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳವಾಗಿ ಹಿರಿಯರು ನ್ಯಾಯಪಂಚಾಯಿತಿ ಮಾಡಿ ಬಗೆಹರಿಸಿದ್ದರು. ಆದರೆ ಯುವಕನ ವಿರುದ್ಧ ಕೆಲವರು ಜಾತಿ ನಿಂದನೆ ಮಾಡಿ ಜೈಲಿಗೆ ಕಳುಹಿಸುವುದಾಗಿ ಹೆದರಿಸಿದ್ದರು. ಜೈಲಿಗೆ ಹೋದರೆ ಮರ್ಯಾದೆ ಹೋಗುತ್ತೆ ಎಂದು ಭಯಗೊಂಡು ಯುವಕ ಮೆಹಬೂಬ್ (22) ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇತ್ತ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ತಂದೆ ಸೈಯದ್ ಅಲಿ ಅವರಿಗೆ ಹೃದಯಾಘಾತ ಆಗಿದೆ. ಸೈಯದ್ ಅಲಿ ಅವರನ್ನು ತಕ್ಷಣ ಕಲ್ಬುರ್ಗಿಯ ಜಯದೇವ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸೈಯದ್ ಅಲಿ ಸಾವನಪ್ಪಿದ್ದು ತಂದೆ ಮಗ ಇಬ್ಬರು ಒಂದೇ ದಿನ ಸಾವನಪ್ಪಿದ್ದು ಮನೆಯಲ್ಲಿ ಕುಟುಂಬಸ್ಥರದ ಮುಗಿಲು ಮುಟ್ಟಿದೆ.