Dakshina Kannada: ಹಿಂದೂ ಮುಖಂಡ ಶರಣ್‌ ಪಂಪ್ವೆಲ್, ವಿಹೆಚ್ಪಿ ಕಾರ್ಯಕರ್ತ ನವೀನ್‌ ನೆರಿಯ ರಿಗೆ ಬಿಗ್‌ ರಿಲೀಫ್‌ ನೀಡಿದ ಹೈಕೋರ್ಟ್‌

Share the Article

Dakshina Kannada: ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಹಿಂದೂ ಮುಖಂಡ ಶರಣ್‌ ಪಂಪ್‌ವೆಲ್‌ ಅವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ವಕೀಲ ಅರುಣ್‌ ಶ್ಯಾಮ್‌ ಅವರು ವಿನಾಕಾರಣ ದ್ವೇಷ ಭಾಷಣದ ಆರೋಪವನ್ನು ಹೊರಿಸಲಾಗಿದೆ ಎಂದು ವಾದ ಮಂಡಿಸಿದರು. ಹೈಕೋರ್ಟ್‌ ಪೀಠ, “ಶರಣ್‌ ಪಂಪ್‌ವೆಲ್‌ ಬಂಧನ ಸೇರಿ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿದೆ. ಶರಣ್‌ ಪಂಪ್‌ವೆಲ್‌ ಅವರು ಪೊಲೀಸರ ವಿಚಾರಣೆಗೆ ಸಹಕರಿಸುವಂತೆ ಸೂಚನೆ ನೀಡಿದೆ.

ಕದ್ರಿ ಠಾಣೆಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆ ಖಂಡನೆ ಮಾಡಿ ಬಂದ್‌ ಕರೆ ನೀಡಿದ ಹಿನ್ನೆಲೆಯಲ್ಲಿ ಶರಣ್‌ ಪಂಪ್‌ವೆಲ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿತ್ತು. ನಂತರ ಶರಣ್‌ ಪಂಪ್‌ವೆಲ್‌ ಅವರ ಬಂಧನ ಆಗಿತ್ತು.

ವಿಹೆಚ್‌ಪಿಯ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್‌ ನೆರಿಯ ಅವರು ಕಡಬ ಪೊಲೀಸರು ತಮ್ಮ ದಾಖಲು ಮಾಡಿರುವ ಎಫ್‌ಐಆರ್‌ ಪ್ರಶ್ನೆ ಮಾಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಾದ ಆಲಿಸಿದ ಹೈಕೋರ್ಟ್‌ ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

 

Comments are closed.