Heart Attack: ಹಾಸನ ಸರಣಿ ಹೃದಯಾಘಾತ ಪ್ರಕರಣ – ತಾಂತ್ರಿಕ ಸಲಹಾ ಸಮಿತಿಯಿಂದ ವರದಿ ಸಿದ್ಧ – ನಾಳೆ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ

Heart Attack: ಹಾಸನದಲ್ಲಿ ನಡೆಯುತ್ತಿರುವ ಸರಣಿ ಹೃದಯಾಗಾತ ಪ್ರಕರಣ ಸಂಬಂಧ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ರವೀಂದ್ರನಾಥ್ ನೇತೃತ್ವದಲ್ಲಿ ಪ್ರಕರಣದ ಕುರಿತು ಹಾಸನ ಡಿಹೆಚ್ ಓ, ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿಗಳ ಜೊತೆ ವರ್ಚುವಲ್ ಮೀಟಿಂಗ್ ಮಾಡಿದ್ದಾರೆ. ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರಾ? ಅಥವಾ ಬೇರೆ ಕಾರಣ ಇತ್ತಾ ಅಂತ ಅಧ್ಯಯನ ಮಾಡಲು ಸೂಚನೆ ನೀಡಲಾಗಿದೆ.

ಈ ಮೊದಲು ಹೃದಯ ಸಂಬಂಧಿ ಖಾಯಿಲೆ ಇತ್ತಾ? ಎಷ್ಟು ಜನ ಆಸ್ಪತ್ರೆಗೆ ತಲುಪಿದ್ದಾರೆ?ಎಂಬಿತ್ಯಾದಿ ಮಾಹಿತಿಗಳನ್ನು ಸಮಿತಿಯಿಂದ ಕೇಳಲಾಗಿದೆ. ಹಾಸನ ಹೃದಯಾಘಾತ ತನಿಖಾ ವರದಿಯ ಅಂಶಗಳಲ್ಲಿ ಮತ್ತಷ್ಟು ಕಾರಣಗಳು ಬಯಲಾಗಿದೆ. ಮರಣೋತ್ತರ ಪರೀಕ್ಷೆ ಸರ್ಟಿಫಿಕೇಟ್ ಬಿಟ್ಟು ತಜ್ಞರ ತಂಡ ಕೇಸ್ ಸ್ಟಡಿ ಮಾಡುತ್ತಿದೆ. ಹಾಸನದಲ್ಲಿ ಮೃತ ಪಟ್ಟ ಅಷ್ಟು ಜನರಲ್ಲಿ 4 ಜನರು ಮಾತ್ರ ಮರಣೋತ್ತರ ಆಗಿದೆ ಉಳಿದವರದ್ದು ಮರಣೋತ್ತರ ಆಗಿಲ್ಲ! ಮೃತ ಪಟ್ಟ ವ್ಯಕ್ತಿಯ ಜೀವನ ಶೈಲಿ, ಮೆಡಿಕಲ್ ಹಿಸ್ಟರಿ, ಬೇರೆ ಖಾಯಿಲೆಗಳಿಂದ ಬಳಲುತ್ತಾ ಇದ್ರ ಅಂತಾ ತನಿಖೆಯನ್ನು ಮಾಡಲಾಗಿದೆ. ಕೇಸ್ ಸ್ಟಡಿ ಆಧಾರದಲ್ಲಿ ವರದಿಯನ್ನು ವೈದ್ಯರ ತಂಡ ಸಿದ್ದಪಡಿಸಿದೆ.
ಡಾ.ರವೀಂದ್ರನಾಥ್ ಮಾತನಾಡಿ ಇವತ್ತು ವರದಿ ಪರಿಶೀಲನೆ ಮಾಡಿ ನಾಳೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ನಾಳೆ ಮಧ್ಯಾಹ್ನ 12 ಗಂಟೆಗೆ ತಂಡ ಜಯದೇಯ ಆಸ್ಪತ್ರೆಗೆ ಆಗಮಿಸುತ್ತಿದ್ದು, ಸಂಗ್ರಹಿಸರೋ ಮಾಹಿತಿಯ ಬಗ್ಗೆ ಅನಲೈಸ್ ಮಾಡಬೇಕಿದೆ. ಮೇ, ಜೂನ್ ನಲ್ಲಿ 23 ಜನ ಮರಣ ಹೊಂದಿದ್ದಾರೆ, ಅವರ ಮೇಲೆ ಅಧ್ಯಯನ ಮಾಡಿದ್ದೇವೆ. ಈ ಪೈಕಿ 7 ಮರಣೋತ್ತರ ಪರೀಕ್ಷೆ ನಡೆದಿದೆ. ಮರಣೋತ್ತರ ಆಗದದ ಪ್ರಕರಣಗಳ ವರ್ಬಲ್ ಅಟಾಪ್ಸಿ ಕೊಡ್ತಿವಿ. ಮರಣೋತ್ತರ, ಕೇಸ್ ಸ್ಟಡಿ ಎರಡು ಮಾಹಿತಿ ಅಧ್ಯಯನ ಮಾಡಿ ನಂತರ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗುವುದು ಎಂದರು.
ಇದನ್ನೂ ಓದಿ: Mumbai: ಹಳಸಿದ ದಾಲ್ ಬಡಿಸಿದ ಹೋಟೆಲ್ ಮಾಲೀಕ – ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ ಶಾಸಕ!
Comments are closed.