Chatbot Grok: ಹಿಟ್ಲರ್‌ನನ್ನು ಹೊಗಳಿದ ಮಸ್ಕ್‌ನ Al ಚಾಟ್‌ಬಾಟ್ ಗ್ರೋಕ್ – ಆಕ್ರೋಶದ ನಂತರ ಪೋಸ್ಟ್‌ಗಳು ಡಿಲೀಟ್

Share the Article

Chatbot Grok: ಎಲಾನ್ ಮಸ್ಕ್ ಸ್ಥಾಪಿತ ಕಂಪನಿ xAI ಅಭಿವೃದ್ಧಿಪಡಿಸಿದ ಚಾಟ್‌ಬಾಟ್ ಗ್ರೋಕ್ನ ಕೆಲವು ಪೋಸ್ಟ್ಗಳು Al ಚಾಟ್‌ಬಾಟ್ ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನನ್ನು ಹೊಗಳಿದ ನಂತರ ಡಿಲೀಟ್ ಮಾಡಿಲಾಗಿದೆ. ಒಂದು ಪೋಸ್ಟ್ನಲ್ಲಿ, ಬಿಳಿಯರ ವಿರೋಧಿ ದ್ವೇಷವನ್ನು ಎದುರಿಸಲು ಹಿಟ್ಲರ್ ಸೂಕ್ತ ಎಂದು ಗ್ರೋಕ್ ಹೇಳಿತ್ತು. ಗ್ರೋಕ್ ಯಹೂದಿಗಳ ವಿರೋಧಿ ಪೋಸ್ಟ್ಗಳನ್ನು ಸಹ ಹಂಚಿಕೊಂಡಿದೆ.

2022ರಲ್ಲಿ ಆರಂಭವಾದ ಎಐನ ಚಾಟ್‌ ಜಿಪಿಟಿ, ಪ್ರಾರಂಭವಾದಾಗಿನಿಂದ ರಾಜಕೀಯ, ಪಕ್ಷಪಾತ, ದ್ವೇಷ ಭಾಷಣ ಮತ್ತು AI ಚಾಟ್‌ಬಾಟ್‌ಗಳ ನಿಖರತೆಯ ಸಮಸ್ಯೆಗಳು ಹೆಚ್ಚಾಗಿರುವುದು ಕಳವಳಕಾರಿಯಾಗಿವೆ. “ಗ್ರೋಕ್ ಮಾಡಿದ ಇತ್ತೀಚಿನ ಪೋಸ್ಟ್‌ ನಮ್ಮ ಗಮನಕ್ಕೆ ಬಂದಿದೆ. ಈ ಅನುಚಿತ ಪೋಸ್ಟ್ಗಳನ್ನು ತೆಗೆದುಹಾಕುವ ಕೆಲಸವನ್ನು ಸಕ್ರಿಯವಾಗಿ ಮಾಡುತ್ತಿದ್ದೇವೆ” ಎಂದು ಗ್ರೋಕ್ X ನಲ್ಲಿ ಪೋಸ್ಟ್ ಮಾಡಲಾಗಿದೆ.

“ವಿಷಯ ನಮ್ಮ ಗಮನಕ್ಕೆ ಬಂದಾಗಿನಿಂದ, X ನಲ್ಲಿ ಗ್ರೋಕ್ ಪೋಸ್ಟ್ ಮಾಡುವ ಮೊದಲು ದ್ವೇಷ ಭಾಷಣವನ್ನು ನಿಷೇಧಿಸಲು xAI ಕ್ರಮ ಕೈಗೊಂಡಿದೆ. xAI ಸತ್ಯಾನ್ವೇಷಣೆಗೆ ಮಾತ್ರ ತರಬೇತಿ ನೀಡುತ್ತಿದೆ. X ನಲ್ಲಿರುವ ಲಕ್ಷಾಂತರ ಬಳಕೆದಾರರಿಗೆ ಧನ್ಯವಾದಗಳು. ನಿಮ್ಮ ಸಹಕಾರದಿಂದ ಮಾತ್ರ, ಗ್ರೋಕ್‌ ಅನ್ನು ಸುಧಾರಿಸಬಹುದಾದ ಮಾದರಿಯನ್ನು ನಾವು ತ್ವರಿತವಾಗಿ ಗುರುತಿಸಲು ಮತ್ತು ನವೀಕರಿಸಲು ಸಾಧ್ಯವಾಗುತ್ತದೆ.”

ಇದನ್ನೂ ಓದಿ: Mobile recharge: ಗ್ರಾಹಕರಿಗೆ ಮತ್ತೆ ಬರೆ – ಡಿಸೆಂಬ‌ರ್ ವೇಳೆಗೆ ಮೊಬೈಲ್ ರೀಚಾರ್ಜ್ ಯೋಜನೆಗಳ ಬೆಲೆ ಶೇ.10-12ರಷ್ಟು ಹೆಚ್ಚಾಗುವ ಸಾಧ್ಯತೆ

Comments are closed.