Home News Kolkata : ಆನಿವರ್ಸರಿಗೆಂದು ಹೆಂಡತಿಗೆ 49 ಸಾವಿರದ ಮೊಬೈಲ್ ಗಿಫ್ಟ್ ಕೊಟ್ಟ ಗಂಡ – ಆನ್...

Kolkata : ಆನಿವರ್ಸರಿಗೆಂದು ಹೆಂಡತಿಗೆ 49 ಸಾವಿರದ ಮೊಬೈಲ್ ಗಿಫ್ಟ್ ಕೊಟ್ಟ ಗಂಡ – ಆನ್ ಮಾಡ್ತಿದ್ದಂತೆ ಮನೆಗೆ ಬಂದ ಪೊಲೀಸ್

Hindu neighbor gifts plot of land

Hindu neighbour gifts land to Muslim journalist

Kolkata : ಲಾಯರ್ ಒಬ್ಬರು ವೆಡ್ಡಿಂಗ್ ಆನಿವರ್ಸರಿ ಪ್ರಯುಕ್ತ ತನ್ನ ಹೆಂಡತಿಗೆ ಸುಮಾರು 49, ಬೆಲೆಬಾಳುವ ಮೊಬೈಲ್ ಅನ್ನು ಗಿಫ್ಟ್ ಕೊಟ್ಟಿದ್ದಾರೆ. ಆದರೆ ವಿಚಿತ್ರ ಏನೆಂದರೆ ಈ ಫೋನ್ ಅನ್ನು ಆನ್ ಮಾಡುತ್ತಿದ್ದಂತೆ ಪೊಲೀಸರು ಮನೆಗೆ ಬಂದಿದ್ದಾರೆ. ಯಾಕಾಗಿ ಗೊತ್ತಾ? ಇಲ್ಲಿದೆ ನೋಡಿ ಡೀಟೇಲ್ಸ್.

ಹೌದು, ಈ ವರ್ಷದ ಆರಂಭದಲ್ಲಿ ಸಾಲ್ಟ್ ಲೇಕ್ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವಕೀಲರೊಬ್ಬರು ಕೋಲ್ಕತ್ತಾದ ಮಿಷನ್ ರೋ ಎಕ್ಸ್‌ಟೆನ್ಷನ್‌ನಲ್ಲಿರುವ ಅಂಗಡಿಯಿಂದ ಮೊಬೈಲ್ ಖರೀದಿಸಿದ್ದರು. ಈ ಮೊಬೈಲ್‌ಗೆ ವಕೀಲರು ಬರೋಬ್ಬರಿ 49,000 ರೂಪಾಯಿ ಪಾವತಿಸಿದ್ದರು. ಇದೇ ಮೊಬೈಲ್‌ನ್ನು ಫೆಬ್ರವರಿಯ ತಮ್ಮ ಮದುವೆ ವಾರ್ಷಿಕೋತ್ಸವ ದಿನದಂದು ಪತ್ನಿಗೆ ಉಡುಗೊರೆಯಾಗಿ ನೀಡಿ ಸರ್ಪೈಸ್ ನೀಡಿದ್ದರು. ಗಂಡನ ಈ ದುಬಾರಿ ಬೆಲೆ ಬಾಳುವ ಗಿಫ್ಟ್ ನೋಡಿ ಹೆಂಡತಿಯಂತೂ ಸಕ್ಕತ್ ಖುಷಿಯಾಗಿದ್ದಳು. ಆದರೆ ಈ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ.

ಯಾಕೆಂದರೆ ಮೊಬೈಲ್ ಬಳಸಲು ಆರಂಭಿಸಿದ ವಾರದ ನಂತರ ಪೊಲೀಸರು ಕೋಲ್ಕತ್ತಾದ ವಕೀಲರ ಮನೆ ಬಾಗಿಲನ್ನು ತಟ್ಟಿದ್ದಾರೆ. ಕಾರಣ ವಕೀಲರ ಪತ್ನಿ ಬಳಸುತ್ತಿದ್ದ ಮೊಬೈಲ್, ಸೈಬರ್ ಅಪರಾಧಗಳಲ್ಲಿ ಬಳಕೆಯಾಗಿತ್ತು. ಪೊಲೀಸರು ಫೋನಿನ ಅಂತರರಾಷ್ಟ್ರೀಯ ಮೊಬೈಲ್ ಸಲಕರಣೆ ಗುರುತು (IMEI) ಆಧಾರದ ಮೇಲೆ ಕೋಲ್ಕತ್ತಾ ತಲುಪಿದ್ದರು. ಮೊಬೈಲ್ ಖರೀದಿ ವೇಳೆ ಬಾಕ್ಸ್ ಸೀಲ್ ಆಗಿತ್ತು. ಹಾಗೆಯೇ ಜಿಎಸ್‌ಟಿ ಇನ್ ವಾಯ್ಸ್‌ನೊಂದಿಗೆ ಬಂದಿತ್ತು. ವಕೀಲರು ಖರೀದಿಸಿದ ಮೊಬೈಲ್ ಹೊಚ್ಚ ಹೊಸತನಂತೆಯೇ ಕಾಣಿಸುತ್ತಿತ್ತು. ಖರೀದಿ ವೇಳೆ ಎಲ್ಲಿಯೂ ಇದು ಹಳೆಯ ಮೊಬೈಲ್ ಎಂಬಂತೆ ಕಾಣಿಸುತ್ತಿರಲಿಲ್ಲ. ಆದರೂ ಈ ಮೊಬೈಲ್ ಆನ್‌ಲೈನ್ ವಂಚನೆಯಲ್ಲಿ ಬಳಸಲಾದ ಸಾಧನಕ್ಕೆ ಹೊಂದಿಕೆಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ ಪೊಲೀಸರು ಹೇಳಿದ ವಿಷಯ ಕೇಳುತ್ತಿದ್ದಂತೆ ವಕೀಲರು ಮತ್ತು ಅವರ ಪತ್ನಿ ಶಾಕ್ ಆಗಿದ್ದರು. ನಾವು ಕಾನೂನುಬದ್ಧವಾಗಿಯೇ ಮೊಬೈಲ್ ಖರೀದಿಸಿದ್ದೇವೆ. ನಾವು ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ. ಸೈಬರ್ ಅಪರಾಧ ಚಟುವಟಿಕೆಯಲ್ಲಿಯೂ ಮೊಬೈಲ್ ಬಳಸಿಲ್ಲ ಎಂದು ಪೊಲೀಸರ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತ ವಕೀಲರು, ಕೋಲ್ಕತ್ತಾದ ಹರೇ ಸ್ಟ್ರೀಟ್ ಪೊಲೀಸ್ ಠಾಣೆಗೆ ಫೋನ್ ಮಾಡಿ ಮೌಖಿಕವಾಗಿ ದೂರು ದಾಖಲಿಸಿದ್ದಾರೆ. ಮತ್ತೊಂದೆಡೆ ತಾವು ಮೊಬೈಲ್ ಖರೀದಿಸಿದ್ದ ಅಂಗಡಿಯ ಮಾಹಿತಿ ಮತ್ತು ಬಿಲ್ ಪಾವತಿಯ ದಾಖಲೆಯನ್ನು ಪೊಲೀಸರಿಗೆ ನೀಡಿದ್ದಾರೆ.

ಇದೀಗ ಪೊಲೀಸರು ಮೊಬೈಲ್ ಶಾಪ್ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಹಾಗೆ ಈ ಮೊಬೈಲ್ ಎಲ್ಲಿಂದ ವಿತರಣೆಯಾಗಿದೆ ಎಂಬುದರ ಬಗ್ಗೆಯೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Kerala: ಕಾಸರಗೋಡು: ತಲೆಮರೆಸಿಕೊಂಡಿದ್ದ ಆರೋಪಿ 30 ವರ್ಷದ ಬಳಿಕ ಬಂಧನ!