Bengaluru: ಕಾರಿಗೆ ಟಚ್ ಮಾಡಿದಲ್ದೇ ಲಾಂಗ್ ಹಿಡಿದು ಕಿಡಿಗೇಡಿಯ ದರ್ಪ- ಆತನ ಇನ್ನೋವಾ ಕಾರನ್ನೇ ಪುಡಿಗಟ್ಟಿ ಓಟ ಕೀಳುವಂತೆ ಮಾಡಿದ ಜನ !!

Share the Article

Bengaluru : ಕಾರು ಟಚ್ ಆಗಿದ್ದನ್ನು ಪ್ರಶ್ನಿಸಿದ್ದಕ್ಕೆ ಟ್ಯಾಕ್ಸಿ ಚಾಲಕನ ಮೇಲೆ ಇನ್ನೋವಾ ಕಾರು ಚಾಲಕನೊಬ್ಬ ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಪುಂಡನ ಪುಂಡಾಟ ಕಂಡ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ಇತರ ವಾಹನ ಸವಾರರು ಆತನ ಇನ್ನೋವಾ ಕಾರನ್ನೇ ಪುಡಿಗಟ್ಟಿ ಕಿಡಿಗೇಡಿಯನ್ನು ಸ್ಥಳದಿಂದಲೇ ಓಟ ಕೇಳುವಂತೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 

ಹೌದು, ಮೆಜೆಸ್ಟಿಕ್ ಸಮೀಪದಲ್ಲಿರುವ ರೈಲ್ವೇ ಗೇಟ್ ಹಿಂಭಾಗದ ರಸ್ತೆಯಲ್ಲಿ ಕ್ಯಾಬ್ ಚಾಲಕ ಕುಮಾರ್ ಪ್ರಯಾಣಿಕನನ್ನು ಕರೆದುಕೊಂಡು ವಿಜಯನಗರದಿಂದ ಬರುತ್ತಿದ್ದ. ಇದೇ ವೇಳೆ ಹಿಂಬದಿಯಿಂದ ಬಂದ ಇನ್ನೋವಾ ಕಾರು ಇಟಿಯೋಸ್ ಕ್ಯಾಬ್‌ಗೆ ಟಚ್ ಆಗಿದೆ. ಈ ವೇಳೆ ಇಬ್ಬರು ಚಾಲಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕಾರಿಂದ ಇಳಿದು ಬಂದ ಇನ್ನೋವಾ ಕಾರು ಚಾಲಕ ಕ್ಯಾಬ್ ಚಾಲಕನಿಗೆ ಥಳಿಸಿದ್ದಾನೆ.

 

ಕಾರಲ್ಲಿ ಪ್ಯಾಸೆಂಜರ್ ಇದ್ದಿದ್ದರಿಂದ ಇಟಿಯೋಸ್ ಕಾರು ಚಾಲಕ ಸುಮ್ಮನಿದ್ದ. ಇಷ್ಟಾದರೂ ಸುಮ್ಮನಾಗದ ಇನ್ನೋವಾ ಕಾರು ಚಾಲಕ ಕಾರಿನಿಂದ ಮಚ್ಚು ತಂದು ಇಟಿಯೋಸ್ ಕಾರು ಚಾಲಕನ ಕುತ್ತಿಗೆಗೆ ಇಟ್ಟು ಬೆದರಿಕೆ ಹಾಕಿದ್ದಾನೆ. ಇದರಿಂದ ಆತ ಭಯಗೊಂಡರೇ, ಅಲ್ಲೇ ಇದ್ದ ಜನರು ರೊಚ್ಚಿಗೆದ್ದು, ಇನ್ನೋವಾ ಕಾರಿನ ಗಾಜುಗಳನ್ನು ಕಲ್ಲಿನಿಂದ ಪುಡಿಪುಡಿ ಮಾಡಿದ್ದಾರೆ. ಜನರ ಆಕ್ರೋಶಕ್ಕೆ ಹೆದರಿದ ಕಿಡಿಗೇಡಿ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಇದೀಗ ಪೊಲೀಸರು ಈ ಕಿಡಿಗೇಡಿಗಾಗಿ ಬಲೆ ಬೀಸಿದ್ದಾರೆ.

 

ಈ ಬಗ್ಗೆ ಇಟಿಯೋಸ್ ಕಾರು ಚಾಲಕ ಕುಮಾರ್ ಹೇಳಿಕೆ ನೀಡಿದ್ದು, ಮಧ್ಯಾಹ್ನ 1:40 ರ ಸುಮಾರಿಗೆ ಘಟನೆ ನಡೆದಿದೆ. ಹಿಂಭಾಗದಿಂದ ನನ್ನ ಕಾರಿಗೆ ಇನ್ನೋವಾ ಕಾರ್ ಟಚ್ ಆಯ್ತು. ಕಾರು ಚಾಲಕ ಇಳಿದು ಬಂದು ನನಗೆ ನಾಲ್ಕು ಏಟು ಹೊಡೆದಿದ್ದಾನೆ ಎಂದಿದ್ದಾರೆ. ಅಲ್ಲದೆ ಗಾಡಿಯಲ್ಲಿ ಎಂಪ್ಲಾಯ್ಸ್ ಇದ್ದಿದ್ದರಿಂದ ನಾನು ಸುಮ್ಮನೆ ಇದ್ದೆ. ನಾನು ಕೂಡ ಕಾರಿನಿಂದ ಇಳಿದಿರಲಿಲ್ಲ. ಆಗ ಅವನು ಕಾರಿನಿಂದ ಮಚ್ಚು ತಂದು ಕುತ್ತಿಗೆಗೆ ಇಟ್ಟಿದ್ದ. ಸ್ಥಳೀಯರೆಲ್ಲಾ ಸೇರಿ ತಡೆದು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಎಲ್ಲರ ಬರ್ತಿದ್ದಂತೆ ಮಾತಾಡಿ ಎಸ್ಕೇಪ್ ಆಗಲು ಪ್ರಯತ್ನ ಮಾಡಿದ್ದಾನೆ. ಆಗ ಎಲ್ಲಾರೂ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ತಡೆದಿದ್ದಾರೆ. ನಂತರ ಕಾರು ಅಲ್ಲೇ ಬಿಟ್ಟು ಆತ ತಪ್ಪಿಸಿಕೊಂಡು ಓಡಿದ್ದಾನೆ ಎಂದು ಹೇಳಿದ್ದಾರೆ.

 

Comments are closed.