Darshan Thoogudeepa: ಹೊಸ ದಿನಾಂಕದಂದು ನಟ ದರ್ಶನ್ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಿದ ಕೋರ್ಟ್

Darshan Thoogudeepa: ಸಿನಿಮಾ ಶೂಟಿಂಗ್‌ಗಾಗಿ ನಟ ದರ್ಶನ್ ಅವರು ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ ನೀಡಿದೆ. ಜುಲೈ 11 ರಿಂದ ಜುಲೈ 30 ರವರೆಗೆ ವಿದೇಶಕ್ಕೆ ಹೋಗಲು ಕೋರ್ಟ್ ಅನುಮತಿ ನೀಡಿದೆ. ಡೆವಿಲ್ ಸಿನಿಮಾ ಶೂಟಿಂಗ್‌ಗೆಂದು ಯುರೋಪ್ ಹಾಗೂ ದುಬೈಗೆ ದರ್ಶನ್ ತೆರಳಲಿದ್ದಾರೆ.

ಹೈಕೋರ್ಟ್ ನೀಡಿದ್ದ ಜಾಮೀನು ಆದೇಶದಲ್ಲಿ ಕೋರ್ಟ್ ಅನುಮತಿಯಿಲ್ಲದೇ ವ್ಯಾಪ್ತಿ ಬಿಟ್ಟು ತೆರಳುವಂತಿಲ್ಲವೆಂದು ಷರತ್ತು ವಿಧಿಸಿತ್ತು. ಷರತ್ತಿನಿಂದ ವಿನಾಯಿತಿ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು.
ನಟ ದರ್ಶನ್ ಆರ್ಥಿಕವಾಗಿ ಸಬಲನಾಗಿದ್ದು, ವಿದೇಶಕ್ಕೆ ತೆರಳಲು ಅನುಮತಿ ನೀಡಿದರೆ ಮರಳಿ ಬಾರದೇ ಇರಬಹುದು, ಅನುಮತಿ ಈ ಕಾರಣಕ್ಕೆ ನೀಡಬಾರದು ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್ ಜುಲೈ 1 ರಿಂದ ಜುಲೈ 25ರವರೆಗೆ ವಿದೇಶ ಪ್ರಯಾಣಕ್ಕೆ ನಟ ದರ್ಶನ್ ಅವರಿಗೆ ಅನುಮತಿ ನೀಡಿತ್ತು. ಆದರೆ ಕೋರ್ಟ್ ನೀಡಿದ್ದ ಈ ಅವಧಿಯಲ್ಲಿ ವಿದೇಶಕ್ಕೆ ತೆರಳಲು ಸಾಧ್ಯವಾಗಲಿಲ್ಲ.
ಜುಲೈ 11 ರಿಂದ ಜುಲೈ 30 ರವರೆಗೆ ವಿದೇಶಕ್ಕೆ ಪ್ರಯಾಣ ಮಾಡಲು ದರ್ಶನ್ ಅರ್ಜಿ ಸಲ್ಲಿಸಿದ್ದು, ಇಂದು ಇದರ ವಿಚಾರಣೆ ನಡೆದಿದೆ.
ಇದನ್ನು ಓದಿ: Shivamogga: ಕೆಲಸ ಮಾಡುವ ಸಂದರ್ಭದಲ್ಲಿ ತಲೆ ಮೇಲೆ ಬಿದ್ದ ಮರದ ದಿಮ್ಮಿ: ವ್ಯಕ್ತಿ ಸಾವು
Comments are closed.