Pramod Muthalik: ಜು.13 ರಂದು ಜಮ್ಮುವಿನಲ್ಲಿ ನಡೆಯುವ ಹಿಂದೂ ಸಮಾವೇಶದಲ್ಲಿ ಶ್ರೀರಾಮ ಸೇನೆ ಭಾಗಿ: ಮುತಾಲಿಕ್ ‌

Share the Article

Hubballi: ಜಮ್ಮು ಕಾಶ್ಮೀರದಲ್ಲಿ ಜು.13 ರಂದು ಜಮ್ಮುವಿನಲ್ಲಿ ವಿಶ್ವ ಮಟ್ಟದ ಹಿಂದೂಪರ ಸಂಘಟನೆಗಳ ಸಮಾವೇಶ ನಡೆಯಲಿದ್ದು ಶ್ರೀರಾಮಸೇನೆ ಸಮಾವೇಶದಲ್ಲಿ ಪಾಲ್ಗೊಳ್ಳಲಿದೆ ಎಂದು ಶ್ರೀ ರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ತಿಳಿಸಿದ್ದಾರೆ.

ಕಾಶ್ಮೀರಿ ಪಂಡಿತರು, ಹಿಂದೂಗಳು ಸಂಕಷ್ಟದಲ್ಲಿದ್ದು, ಜಮ್ಮು ನಿರಾಶ್ರಿತರ ಪ್ರದೇಶದಲ್ಲಿ ಹಿಂದೂಗಳು ಸಂಕಷ್ಟದಲ್ಲಿದ್ದರೂ ಒಬ್ಬ ಕೇಂದ್ರ ಸಚಿವ ಭೇಟಿ ನೀಡಿ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಶ್ರೀರಾಮ ಸೇನಾ ಜಮ್ಮು ಸಮಾವೇಶದಲ್ಲಿ ಕೈಗೊಳ್ಳುವ ನಿರ್ಣಯಗಳಿಗೆ ಬದ್ಧವಾಗಿದೆ. ಪಹಲ್ಗಾಮ್‌ ಹತ್ಯಾಕಾಂಡದ ನಂತರ ಪಾಕಿಸ್ತಾನದ ಜೊತೆ ವ್ಯಾಪಾರ, ವಹಿವಾಟು ಬಂದ್‌ ಮಾಡಿದ್ದ ಕೇಂದ್ರ ಸರಕಾರ ಹಾಕಿ ಆಡಲು, ಬಾಂಗ್ಲಾದೊಂದಿಗೆ ಕ್ರಿಕೆಟ್‌ ಆಡಲು ಒಪ್ಪಿಗೆ ನೀಡಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Puttur: ಪುತ್ತೂರು: ಪಿಜಿ ಜಗನ್ನಿವಾಸ ರಾವ್‌ ಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿ ನೋಟಿಸ್‌ ಜಾರಿ ಮಾಡಿದ ಪುತ್ತೂರು ಬಿಜೆಪಿ

Comments are closed.