Protest: ದೇಶಾದ್ಯಂತ ನಾಳೆ ಕಾರ್ಮಿಕ ಸಂಘಟನೆಗಳಿಂದ ಮುಷ್ಕರ – ಪ್ರತಿಭಟಿಸಲಿದ್ದಾರೆ ಬರೋಬ್ಬರಿ 25ಕೋಟಿಗೂ ಹೆಚ್ಚು ಕಾರ್ಮಿಕರು

Protest: ಹಲವು ಬೇಡಿಕೆಗಳಿಗೆ ಆಗ್ರಹಿಸಿ ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಮುಂದಾವೆ. ನಾಳೆ ಬರೋಬ್ಬರಿ 25ಕೋಟಿಗೂ ಹೆಚ್ಚು ಕಾರ್ಮಿಕರು ಬೀದಿಗಿಳಿದು ಪ್ರತಿಭಟಿಸಲಿದ್ದಾರೆ. ದೊಡ್ಡ ಪ್ರಮಾಣದ ಪ್ರತಿಭಟನೆಯಿಂದ ಸಾರ್ವಜನಿಕ ವಲಯದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ.

ಬ್ಯಾಂಕಿಂಗ್, ವಿಮೆ, ಅಂಚೆ, ಕಲ್ಲಿದ್ದಲು ಗಣಿಗಾರಿಕೆ, ಸಾರಿಗೆ ಸೇರಿದಂತೆ ಹಲವು ಕಾರ್ಮಿಕ ಕ್ಷೇತ್ರದಲ್ಲಿ ಸಮಸ್ಯೆ ಇರುವ ಹಿನ್ನೆಲೆಯಲ್ಲಿ lIC, ಕಾರ್ಖಾನೆಗಳು, ಬ್ಯಾಂಕ್ ವ್ಯವಹಾರ ಸ್ಥಗಿತಗೊಳ್ಳಲಿದೆ. ಇಂದು ಮಧ್ಯ ರಾತ್ರಿಯಿಂದ ಕೆಲಸ ಸ್ಥಗಿತಗೊಳ್ಳಲಿದೆ. ನಾಳೆ ಬೆಳಿಗ್ಗೆ 10.30ರಿಂದ ಸಂಜೆ 6 ರವರೆಗೆ ಮುಷ್ಕರ ನಡೆಯಲಿದೆ. ರಾಜ್ಯದ ಕಾರ್ಮಿಕ ಸಂಘಟನೆಯಗಳು ನಾಳೆ ಬೆಳಿಗ್ಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಮಿಕರು ಭಾಗಿಯಾಗುವ ಸಾಧ್ಯತೆ ಇದೆ.
ಅವರ ಬೇಡಿಕೆಗಳೇನು..?
* ನಾಲ್ಕು ಕಾರ್ಮಿಕ ಸಂಹಿತೆ ರದ್ದುಗೊಳಿಸ್ಬೇಕು
* ಕೇಂದ್ರ ಸರ್ಕಾರ ತಂದಿರುವ ನಾಲ್ಕು ಸಂಹಿತೆಗಳನ್ನು ತಿರಸ್ಕರಿಸ್ಬೇಕು
* ಕನಿಷ್ಠ ವೇತನ ಜಾರಿಗೊಳಿಸ್ಬೇಕು
* ಕೇಂದ್ರ ತಂದಿರುವ ನಿಯಮದಲ್ಲಿ ಸಂಘ ರಚಿಸುವ ಹಕ್ಕು ಕಸಿದುಕೊಳ್ಳಲಾಗಿದೆ
* ಇದನ್ನು ರಾಜ್ಯ ಸರ್ಕಾರ ವಾಪಾಸ್ ಪಡೆಯಬೇಕು
ರದ್ದುಗೊಳಿಸಲು ಒತ್ತಾಐಇಸುತ್ತಿರುವ ಸಂಹಿತೆಗಳು
1. ವೇತನ ಸಂಹಿತೆ
2. OSH ಕೋಡ್ ( ಸುರಕ್ಷತೆ, ಆರೋಗ್ಯ ಕೆಲಸದ ಪರಿಸ್ಥಿತಿಗಳ ಸಂಹಿತೆ)
3.ಕೈಗಾರಿಕಾ ಸಂಬಂಧಗಳ ಸಂಹಿತೆ
4.ಸಾಮಾಜಿಕಾ ಭದ್ರತಾ ಸಂಹಿತೆ
ಇದನ್ನೂ ಓದಿ: Kerala: ಕೇರಳ ಮಹಿಳಾ ಪೊಲೀಸರಿಗೆ ಅಸಭ್ಯ ಮೆಸೇಜ್: ಮೈಸೂರಿನಲ್ಲಿ ವೃದ್ಧ ಅರೆಸ್ಟ್
Comments are closed.