Viral Video: ನದಿಯೊಳಗೆ ಬಿತ್ತು 4 ದಿನದ ಹಿಂದೆ ಖರೀದಿಸಿದ ಐಫೋನ್ – ಕೆಲವು ಗಂಟೆಯ ನಂತ್ರ ಮತ್ತೆ ಸಿಕ್ಕಾಗ ಕಾದಿತ್ತು ಅಚ್ಚರಿ!!

Viral Video : ವ್ಯಕ್ತಿಯೊಬ್ಬರು ಕೇವಲ ನಾಲ್ಕು ದಿನಗಳ ಹಿಂದೆ ಖರೀದಿಸಿದಂತಹ ಐಫೋನ್ ಒಂದು ನೀರಿನಲ್ಲಿ ಬಿದ್ದು ಹೋಗಿದೆ. 4 ಗಂಟೆಯ ಬಳಿಕ ಆ ಮೊಬೈಲ್ ಅನ್ನು ನೀರಿನಿಂದ ಪತ್ತೆ ಮಾಡಿ ತೆಗೆಯಲಾಗಿದ್ದು, ಬಳಿಕ ಅಚ್ಚರಿಯೊಂದು ಎದುರಾಗಿದೆ.

ಹೌದು, ನಾಲ್ಕು ದಿನಗಳ ಹಿಂದೆ ಖರೀದಿಸಲಾದ ಐಫೋನ್ 16 ಪ್ರೊ ಮ್ಯಾಕ್ಸ್ ವ್ಯಕ್ತಿ ಕಯಾಕಿಂಗ್ ನಡೆಸುವ ವೇಳೆ ನೀರಿಗೆ ಬಿದ್ದಿದೆ. ಬಳಿಕ ಆ ವ್ಯಕ್ತಿ ಹಾಗೂ ಆತನ ಸ್ನೇಹಿತರು ಅದನ್ನು ಹುಡುಕಿ ತೆಗೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಅಂದಹಾಗೆ ಐಫೋನ್ ನೀರಿಗೆ ಬಿದ್ದ ಸಂದರ್ಭದಲ್ಲಿ ಸ್ನೇಹಿತರು ಮತ್ತು ಸ್ಥಳೀಯರು ಸೇರಿ ಫೋನ್ ಹುಡುಕಲು ನೀರಿಗೆ ಧುಮುಕಿದರು. ಅಷ್ಟರಲ್ಲಿ, ಯಾರೋ ಬಲೆ ಬೀಸಿ ಫೋನ್ ಅನ್ನು ಹಿಂಪಡೆಯಲು ಪ್ರಯತ್ನಿಸಿದರು. ಕೊನೆಗೂ, ಗಂಟೆಗಳ ಪ್ರಯತ್ನದ ನಂತರ ಯಾರೋ ಫೋನ್ ಅನ್ನು ಹುಡುಕುವಲ್ಲಿ ಯಶಸ್ವಿಯಾದರು. ಆದರೆ, ದೊಡ್ಡ ತಿರುವು ಏನೆಂದರೆ, ಗಂಟೆಗಟ್ಟಲೆ ನೀರಿನಲ್ಲಿದ್ದ ಫೋನ್ ಸ್ವಿಚ್ ಆಫ್ ಆಗಿರಲಿಲ್ಲ. ಇದಲ್ಲದೆ, ಬೇರೆ ಯಾವುದೇ ಹಾನಿಯಾಗಿಲ್ಲ.
ವಿಡಿಯೋದಲ್ಲಿರುವ ವ್ಯಕ್ತಿಯೊಬ್ಬರು ಐಫೋನ್‌ಗೆ ಇದಕ್ಕಿಂತ ದೊಡ್ಡ ಪ್ರಚಾರ ಸಿಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ಈ ವಿಡಿಯೋ ವೈರಲ್ ಆದ ನಂತರ, ಅನೇಕ ಜನರು ಬಗೆಬಗೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ: Accident: ಶಾಲಾ ವಾಹನಕ್ಕೆ ರೈಲು ಡಿಕ್ಕಿ: ಇಬ್ಬರು ಮಕ್ಕಳು ಸಾವು; ಮೂವರಿಗೆ ಗಂಭೀರ ಗಾಯ!
Comments are closed.