Accident: ಶಾಲಾ ವಾಹನಕ್ಕೆ ರೈಲು ಡಿಕ್ಕಿ: ಇಬ್ಬರು ಮಕ್ಕಳು ಸಾವು; ಮೂವರಿಗೆ ಗಂಭೀರ ಗಾಯ!

Share the Article

Accident : ಲೆವೆಲ್ ಕ್ರಾಸಿಂಗ್‌ನಲ್ಲಿ ಶಾಲಾ ವಾಹನಕ್ಕೆ ರೈಲು ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಕಡ್ಡಲೂರು ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಕಡ್ಡಲೂರು ಸಮೀಪ ಸೆಮ್ಮನಕೊಪ್ಪಂ ಎಂಬಲ್ಲಿ ಲೆವೆಲ್ ಕ್ರಾಸಿಂಗ್‌ನ್ನು ಶಾಲಾ ವ್ಯಾನ್‌ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವ್ಯಾನ್ ಪೂರ್ತಿ ಜಖಂಗೊಂಡಿದೆ. ವ್ಯಾನಿನ ಚಾಲಕನೂ ಗಾಯಗೊಂಡಿದ್ದು, ಈ ಸಂದರ್ಭದಲ್ಲಿ ವ್ಯಾನಿನಲ್ಲಿ ಐವರು ಮಕ್ಕಳು ಮಾತ್ರ ಇದ್ದರು. ಇಬ್ಬರು ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.

ಇದನ್ನೂ ಓದಿ: Shivamogga: ದೆವ್ವ ಬಿಡಿಸುವುದಾಗಿ ಹಿಗ್ಗ ಮುಖ ಥಳಿತ – ಮಹಿಳೆ ಸಾವು!!

Comments are closed.