Kodagu: ರಸ್ತೆ ದಾಟುತ್ತಿದ್ದ ಕಾಡಾನೆ ಮೇಲೆ ಬಿದ್ದ ವಿದ್ಯುತ್ ತಂತಿ!!

Share the Article

Kodagu: ರಸ್ತೆ ದಾಟುತ್ತಿದ್ದ ಕಾಡಾನೆಗಳ ಪೈಕಿ ಒಂದರ ಮೇಲೆ ವಿದ್ಯುತ್ ತಂತಿ ಬಿದ್ದು ವಿದ್ಯುತ್ ಸ್ಪರ್ಶಗೊಂಡು ನೆಲಕ್ಕೆ ಬಿದ್ದರೂ ಅದನ್ನು ಅಲ್ಲಿಯೇ ಬಿಟ್ಟುಹೋಗಲು ಬಯಸದ ಇತರೆ ಆನೆಗಳು ಸೊಂಡಿಲಿನಿಂದ ಮೇಲಕ್ಕೆತ್ತಿ ತಮ್ಮೊಂದಿಗೆ ಕರೆದುಕೊಂಡು ಹೋದ ಅಪರೂಪದ ಘಟನೆ ನಡೆದಿದೆ.

ಸುತ್ತಮುತ್ತಲಿನ ತೋಟಗಳಲ್ಲಿ ಬೀಡುಬಿಟ್ಟಿರುವ ಗಜಪಡೆ ಅಮ್ಮತ್ತಿ – ಕೊಂಡಂಗೇರಿ ರಸ್ತೆಯನ್ನು ದಾಟುತ್ತಿದ್ದ ಸಂದರ್ಭದಲ್ಲಿ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಇದರಿಂದ ವಿದ್ಯುತ್ ತಂತಿ ತುಂಡಾಗಿ ರಸ್ತೆ ಹಾಯುತ್ತಿದ್ದ ಆನೆಯೊಂದರ ಮೇಲೆ ತಗಲಾಕಿಕೊಂಡಿದೆ. ವಿದ್ಯುತ್ ಸ್ಪರ್ಶಗೊಂಡ ಆನೆ ಕೆಳಗೆ ಬಿದ್ದಿದೆ. ಇದನ್ನರಿತ ಇತರೆ ಆನೆಗಳು ಕೂಡಲೇ ಅದರ ರಕ್ಷಣೆಗೆ ಧಾವಿಸಿ ಸೊಂಡಿಲಿನಿಂದ ಮೇಲಕ್ಕೆತ್ತಿ ಅದರ ಜೀವ ಉಳಿಸಿವೆ.

ಇದನ್ನೂ ಓದಿ: Mangalore: ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

Comments are closed.