Nelamangala: 45 ದಿನದ ಶಿಶುವನ್ನು ಹಂಡೆ ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ

Nelamangala: ತಾಯಿಯೊಬ್ಬಳು ತನ್ನ 45 ದಿನಗಳ ಗಂಡು ಮಗುವನ್ನು ಹಂಡೆ ನೀರಿನಲ್ಲಿ ಮುಳುಗಿಸಿ ಕೊಂದಿರುವ ಘಟನೆ ನೆಲಮಂಗಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ರಾಧಾ (28) ಎಂಬಾಕೆಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

ನಗರದ ವಿಶ್ವೇಶ್ವರಪುರದಲ್ಲಿ ತನ್ನ ತಾಯಿಯ ಮನೆಯಲ್ಲಿ ವಾಸವಿದ್ದ ರಾಧಾ-ಪವನ್ ದಂಪತಿಗೆ ಗಂಡು ಮಗು ಆಗಿತ್ತು. ಪವನ್ ಕುಡಿತದ ದಾಸನಾಗಿದ್ದ. ರಾತ್ರಿ ತಾನು ಓಡಿಸುತ್ತಿದ್ದ ಆಟೋದಲ್ಲಿಯೇ ಮಲಗುತ್ತಿದ್ದ ಎನ್ನಲಾಗಿದೆ. ಈತನ ಕುಡಿತದ ಚಟದಿಂದ ಗಂಡ ಹೆಂಡತಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿದ್ದವು ಎಂದು ವರದಿಯಾಗಿದೆ.
Comments are closed.